Xiaomi ಗೌಪ್ಯತೆ ನೀತಿ
ನಮ್ಮ ಗೌಪ್ಯತೆ ನೀತಿಯು 15 ಜನವರಿ 2021 ರಂದು ಅಪ್‌ಡೇಟ್ ಆಗಿದೆ.
ನಮ್ಮ ಗೌಪ್ಯತೆ ನೀತಿಗಳನ್ನು ಅರ್ಥ ಮಾಡಿಕೊಳ್ಳಿ ಮತ್ತು ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ನಮಗೆ ತಿಳಿಸಿ.
ನಮ್ಮ ಕುರಿತು
Xiaomi Technologies Singapore Pte. Ltd., Xiaomi Technology Netherlands B.V., ಮತ್ತು Xiaomi ಗುಂಪಿನಲ್ಲಿರುವ ಅವರ ಸಂಯೋಜಿತ ಸಂಸ್ಥೆಗಳೆಲ್ಲವನ್ನೂ (ವಿಸ್ತೃತ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಇನ್ನು ಮುಂದೆ "Xiaomi", "ನಾವು", "ನಮ್ಮ" ಅಥವಾ "ನಾವು" ಎಂದು ಉಲ್ಲೇಖಿಸಲಾಗುತ್ತದೆ, ಅವು ನಿಮ್ಮ ಗೌಪ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ನಿಮ್ಮ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಗೌಪ್ಯತೆ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ, ಮತ್ತು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಬಳಸುವ ನಮ್ಮ ಕಾರ್ಯವಿಧಾನವನ್ನು ನೀವು ಸಂಪೂರ್ಣವಾಗಿ ಅರಿತುಕೊಳ್ಳುವುದು ಸಹ ಮುಖ್ಯವಾಗಿದೆ. ಕೊನೆಯದಾಗಿ ಖಚಿತಪಡಿಸುವುದೆಂದರೆ, Xiaomi ಗೆ ಒದಗಿಸುವ ನಿಮ್ಮ ಎಲ್ಲಾ ಮಾಹಿತಿಯ ಮೇಲೆ ನೀವು ನಿಯಂತ್ರಣವನ್ನು ಹೊಂದಿರುತ್ತೀರಿ.
ಈ ಗೌಪ್ಯತೆ ನೀತಿಯ ಕುರಿತು
ಸ್ವತಂತ್ರ ಗೌಪ್ಯತೆ ನೀತಿಯನ್ನು ಒದಗಿಸುವ ನಿರ್ಧಿಷ್ಟ Xiaomi ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಹೊರತುಪಡಿಸಿ, ಈ ಗೌಪ್ಯತೆ ನೀತಿಯನ್ನು ಉಲ್ಲೇಖಿಸುವ ಅಥವಾ ಲಿಂಕ್ ಮಾಡುವ ಎಲ್ಲಾ Xiaomi ಡಿವೈಸ್‌ಗಳು, ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಿಗೆ ಈ ಗೌಪ್ಯತೆ ನೀತಿಯು ಅನ್ವಯಿಸುತ್ತದೆ. ಈ ಗೌಪ್ಯತೆ ನೀತಿಯು, ವೆಬ್‌ಸೈಟ್‌ಗಳಲ್ಲಿರುವ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು (https://www.mi.com, https://en.miui.com, https://account.xiaomi.com) ಮತ್ತು ನಮ್ಮ ಮೊಬೈಲ್ ಡಿವೈಸ್‌ಗಳಲ್ಲಿ ನಮ್ಮ ಅಪ್ಲಿಕೇಶನ್‌ಗಳನ್ನು ಬಳಸಿದಾಗ ನೀವು ನಮಗೆ ನೀಡುವ ಅಥವಾ ನಾವು ನಿಮ್ಮಿಂದ ಸಂಗ್ರಹಿಸುವ ಯಾವುದೇ ವೈಯಕ್ತಿಕ ಮಾಹಿತಿಯನ್ನು Xiaomi ಹೇಗೆ ಸಂಗ್ರಹಿಸುತ್ತದೆ, ಬಳಸುತ್ತದೆ, ಬಹಿರಂಗಪಡಿಸುತ್ತದೆ, ಪ್ರಕ್ರಿಯೆಗೊಳಿಸುತ್ತದೆ ಮತ್ತು ರಕ್ಷಿಸುತ್ತದೆ ಎಂಬುದನ್ನು ವಿವರಿಸುತ್ತದೆ. Xiaomi ಉತ್ಪನ್ನವು ಪ್ರತ್ಯೇಕ ಗೌಪ್ಯತೆ ನೀತಿಯನ್ನು ಒದಗಿಸಿದರೆ, ಪ್ರತ್ಯೇಕ ಗೌಪ್ಯತೆ ನೀತಿಯು ಆದ್ಯತೆಯಲ್ಲಿ ಜಾರಿಗೆ ಬರುತ್ತದೆ, ಆದರೆ ನಿರ್ದಿಷ್ಟವಾಗಿ ಬಹಿರಂಗಪಡಿಸದ ಭಾಗವು ಈ ಗೌಪ್ಯತೆ ನೀತಿಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಇದಲ್ಲದೆ, ಮಾದರಿ, ಸೇವಾ ಆವೃತ್ತಿ ಅಥವಾ ಪ್ರದೇಶವನ್ನು ಅವಲಂಬಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿರ್ದಿಷ್ಟ ಉತ್ಪನ್ನಗಳು ಮತ್ತು ಸೇವೆಗಳು ಹೇಗೆ ಸಂಗ್ರಹಿಸುತ್ತವೆ ಮತ್ತು ಪ್ರಕ್ರಿಯೆಗೊಳಿಸುತ್ತವೆ ಎಂಬುದು ಸಹ ಬದಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಪ್ರತ್ಯೇಕ ಗೌಪ್ಯತೆ ನೀತಿಯನ್ನು ರೆಫರ್ ಮಾಡಿ ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ.
ಈ ಗೌಪ್ಯತೆ ನೀತಿಯ ಅಡಿಯಲ್ಲಿ, "ವೈಯಕ್ತಿಕ ಮಾಹಿತಿ" ಎಂದರೆ, ವ್ಯಕ್ತಿಯೊಬ್ಬರನ್ನು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಗುರುತಿಸುವ ಮಾಹಿತಿ ಎಂದರ್ಥ. ನಿಮ್ಮ ಪ್ರದೇಶದಲ್ಲಿ ಅನ್ವಯವಾಗುವ ಕಾನೂನುಗಳಿಂದ ನಿರ್ದಿಷ್ಟವಾಗಿ ಒದಗಿಸಲಾಗಿರುವುದನ್ನು ಹೊರತುಪಡಿಸಿ, ಆ ಮಾಹಿತಿಯು ಒಂದೇ ಇರಬಹುದು ಅಥವಾ ಆ ವ್ಯಕ್ತಿಯ ಕುರಿತು Xiaomi ಪ್ರವೇಶ ಹೊಂದಿರುವ ಇತರ ಮಾಹಿತಿಯೂ ಆಗಿರಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಗೌಪ್ಯತೆ ನೀತಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಬಳಸುತ್ತೇವೆ. ಸಂದರ್ಭವು ಬಯಸಿದರೆ, ವೈಯಕ್ತಿಕ ಮಾಹಿತಿ ಕೂಡ ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿಯನ್ನು ಒಳಗೊಂಡಿರಬೇಕಾಗುತ್ತದೆ ಹಾಗೂ ಅದನ್ನು ಅನ್ವಯಿಸುವ ಕಾನೂನು ಅಡಿಯಲ್ಲಿ ವರ್ಗೀಕರಿಸಲಾಗುತ್ತದೆ.
ನಾವು ನಿಮಗೆ ಹೇಗೆ ಸಹಾಯ ಮಾಡಬಹುದು
ಅಂತಿಮವಾಗಿ, ನಮ್ಮೆಲ್ಲಾ ಬಳಕೆದಾರರಿಗೂ ಅತ್ಯುತ್ತಮವಾದದ್ದನ್ನು ನೀಡುವುದೇ ನಮ್ಮ ಕಾಳಜಿಯಾಗಿದೆ. ಈ ಗೌಪ್ಯತೆ ನೀತಿಯಲ್ಲಿ ಸಂಕ್ಷಿಪ್ತವಾಗಿ ಹೇಳಿದಂತೆ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ನಮ್ಮ ಡೇಟಾ ನಿರ್ವಹಣಾ ವಿಧಾನಗಳ ಕುರಿತು ನಿಮಗೆ ಆತಂಕ ಇದ್ದಲ್ಲಿ, ನಿಮ್ಮ ನಿರ್ದಿಷ್ಟ ಸಮಸ್ಯೆಗಳನ್ನು ತಿಳಿಸಲು ದಯವಿಟ್ಟು https://privacy.mi.com/support ಮೂಲಕ ಸಂಪರ್ಕಿಸಿ. ನಿಮ್ಮ ಅಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ.
1. ಯಾವ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಮತ್ತು ನಾವದನ್ನು ಬಳಸುವ ಬಗೆ ಹೇಗೆ
1.1 ನಾವು ಯಾವ ಮಾಹಿತಿ ಸಂಗ್ರಹಿಸುತ್ತೇವೆ
ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು ನಮಗೆ ಅವಶ್ಯಕತೆ ಇರುವ ವೈಯಕ್ತಿಕ ಮಾಹಿತಿಯನ್ನು ಒದಗಿಸಲು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ನಿರ್ದಿಷ್ಟ, ವಾಸ್ತವಿಕ, ಸ್ಪಷ್ಟ ಮತ್ತು ಕಾನೂನುಬದ್ಧ ಉದ್ದೇಶಗಳಿಗೆ ಅಗತ್ಯವಿರುವ ಮಾಹಿತಿಯನ್ನು ಮಾತ್ರ ನಾವು ಸಂಗ್ರಹಿಸುತ್ತೇವೆ ಮತ್ತು ಆ ಉದ್ದೇಶಗಳಿಗೆ ಹೊರತಾಗಿ ಅದನ್ನು ಬೇರಾವ ರೀತಿಯಲ್ಲೂ ಬಳಸುವುದಿಲ್ಲ. ನಾವು ವಿನಂತಿಸಿದ ಮಾಹಿತಿಯನ್ನು ಒದಗಿಸಬೇಕೆ ಅಥವಾ ಬೇಡವೇ ಎಂಬುದರ ಆಯ್ಕೆ ಹಕ್ಕು ನಿಮ್ಮದೇ ಆಗಿರುತ್ತದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸದಿದ್ದರೆ, ನಮ್ಮ ಉತ್ಪನ್ನಗಳು, ಸೇವೆಗಳನ್ನು ನಿಮಗೆ ಒದಗಿಸಲು ಅಥವಾ ನಿಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಮಗೆ ಸಾಧ್ಯವಾಗದಿರಬಹುದು.
ನೀವು ಆಯ್ಕ ಮಾಡುವ ಸೇವೆಯ ಆಧಾರದ ಮೇಲೆ, ನಾವು ಈ ಕೆಳಗಿನ ರೀತಿಯ ಮಾಹಿತಿಯನ್ನು ಸಂಗ್ರಹಿಸಬಹುದು:
1.1.1 ನೀವು ನಮಗೆ ಒದಗಿಸಿದ ಮಾಹಿತಿ:
ನೀವು ನಮಗೆ ಒದಗಿಸುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸಬಹುದಾಗಿದೆ, ಅದು ನೀವು ಆಯ್ಕೆಮಾಡಿದ ಸೇವೆಗೆ ಅಗತ್ಯವಾಗಿರುತ್ತದೆ. ಉದಾಹರಣೆಗೆ, ನೀವು mi.com ಚಿಲ್ಲರೆ ವ್ಯಾಪಾರ ಸೇವೆಗಳನ್ನು ಬಳಸಿದರೆ ನಿಮ್ಮ ಹೆಸರು, ಮೊಬೈಲ್ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಡೆಲಿವರಿ ವಿಳಾಸ, ಆರ್ಡರ್ ಮಾಹಿತಿ, ಇನ್‌ವಾಯ್ಸಿಂಗ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಖಾತೆದಾರರ ಹೆಸರು, ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಇತರೆ ಮಾಹಿತಿಯನ್ನು ಒದಗಿಸಬೇಕಾಗಬಹುದು; ನೀವು Xiaomi ಕ್ಲೌಡ್ ಸೇವೆಗಳನ್ನು ಬಳಸಿದರೆ ವಸ್ತುಗಳನ್ನು ಅಥವಾ ಡೇಟಾವನ್ನು ಸಿಂಕ್ ಮಾಡಬೇಕಾಬಹುದು; ನೀವು ಖಾತೆಯನ್ನು ರಚಿಸಿದರೆ ನೀವು ನಿಮ್ಮ ಪುರುಷ/ಸ್ತ್ರೀ ಮಾಹಿತಿ, ನಿಮ್ಮ ಭದ್ರತೆ ಸಂಬಂಧಿತ ಮಾಹಿತಿ ಹಾಗೂ ಇತರೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ನೀವು ಪ್ರಮೋಷನಲ್ ಚಟುವಟಿಕೆಯಲ್ಲಿ ಭಾಗಿಯಾದರೆ, ನೀವು ನಿಮ್ಮ ಅಡ್ಡ ಹೆಸರು, ಇಮೇಲ್ ವಿಳಾಸ, ಫೋಟೋಗಳು, ವೀಡಿಯೊಗಳು ಅಥವಾ ಇತರೆ ಅವಶ್ಯಕ ಮಾಹಿತಿಯನ್ನು ಒದಗಿಸಬೇಕಾಗಬಹುದು; ನೀವು ನಮ್ಮೊಂದಿಗೆ ಭಾಗವಹಿಸಿದರೆ, ನಮ್ಮ ಕಂಟೆಂಟ್ ನೋಡಿದರೆ, ಅಥವಾ ನಮ್ಮ ಮಾರ್ಕೇಟಿಂಗ್‌ನಲ್ಲಿ ಭಾಗವಹಿಸಿದರೆ ಅಥವಾ ಬಹುಮಾನ ಪಡೆದರೆ ನೀವು ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಒದಗಿಸಬೇಕಾಗಬಹುದು.
1.1.2 ನೀವು ಸೇವೆಗಳನ್ನು ಬಳಸುವಾಗ ನಾವು ಸಂಗ್ರಹಿಸುವ ಮಾಹಿತಿ
• ಡಿವೈಸ್ ಅಥವಾ ಸಿಮ್-ಸಂಬಂಧಿತ ಮಾಹಿತಿ. ಉದಾಹರಣೆಗೆ, IMEI/OAID, GAID ಸಂಖ್ಯೆ, IMSI ಸಂಖ್ಯೆ, MAC ವಿಳಾಸ, ಕ್ರಮ ಸಂಖ್ಯೆ, ಸಿಸ್ಟಂ ಆವೃತ್ತಿ ಮತ್ತು ಪ್ರಕಾರ, ROM ಆವೃತ್ತಿ, Android ಆವೃತ್ತಿ, Android ಐಡಿ, ಸ್ಥಳ ಐಡಿ, ಸಿಮ್ ಕಾರ್ಡ್ ಆಪರೇಟರ್ ಮತ್ತು ಅದರ ಸ್ಥಳ ಪ್ರದೇಶ, ಸ್ಕ್ರೀನ್ ಡಿಸ್‌ಪ್ಲೇ ಮಾಹಿತಿ, ಡಿವೈಸ್‌ನ ಕೀಪ್ಯಾಡ್ ಮಾಹಿತಿ, ಡಿವೈಸ್ ತಯಾರಕರ ವಿವರಗಳು ಮತ್ತು ಮಾಡೆಲ್ ಹೆಸರು, ಡಿವೈಸ್ ಸಕ್ರಿಯಗೊಳಿಸಿದ ಸಮಯ, ನೆಟ್‌ವರ್ಕ್ ಆಪರೇಟರ್, ಸಂಪರ್ಕ ಪ್ರಕಾರ, ಮೂಲ ಹಾರ್ಡ್‌ವೇರ್ ಮಾಹಿತಿ ಮತ್ತು ಬಳಕೆಯ ಮಾಹಿತಿ (ಉದಾಹರಣೆಗೆ CPU, ಸಂಗ್ರಹಣೆ, ಬ್ಯಾಟರಿ ಬಳಕೆ, ಸ್ಕ್ರೀನ್ ರೆಸಲ್ಯೂಶನ್ ಮತ್ತು ಡಿವೈಸ್ ತಾಪಮಾನ, ಕ್ಯಾಮರಾ ಲೆನ್ಸ್ ಮಾಡೆಲ್, ಎಷ್ಟು ಬಾರಿ ಸ್ಕ್ರೀನ್ ಎಚ್ಚರಗೊಂಡಿದೆ ಹಾಗೂ ಅನ್‌ಲಾಕ್ ಆಗಿದೆ ಎಂಬುದು).
• ನಿಮಗೆ ನಿರ್ದಿಷ್ಟವಾದ ಮಾಹಿತಿಯನ್ನು ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು ಮತ್ತು ವ್ಯಾಪಾರ ಪಾಲುದಾರರು ನಿಯೋಜಿಸಿರಬಹುದಾಗಿದೆ: ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು ಮತ್ತು ವ್ಯಾಪಾರ ಪಾಲುದಾರರು ನಿಯೋಜಿಸಿರುವ ನಿಮ್ಮ ಜಾಹೀರಾತು ಐಡಿಯಂತಹ ಮಾಹಿತಿಯನ್ನು ನಾವು ಸಂಗ್ರಹಿಸಬಹುದು ಮತ್ತು ಬಳಸಬಹುದು.
• ನಿಮ್ಮ ಆ್ಯಪ್ ಬಳಕೆಗೆ ಸಂಬಂಧಿಸಿದ ಮಾಹಿತಿ, ಆ್ಯಪ್‌ನ ಅನನ್ಯ ಪತ್ತೆಮಾಡುವಿಕೆ (ಉದಾ, VAID, OAID, AAID, ಇನ್‌ಸ್ಟೆನ್ಸ್ ಐಡಿ), ಆ್ಯಪ್‌ನ ಮೂಲ ಮಾಹಿತಿಯನ್ನು ಒಳಗೊಂಡಂತೆ, ಉದಾಹರಣೆಗೆ, ಆ್ಯಪ್ ಪಟ್ಟಿ, ಆ್ಯಪ್ ಐಡಿ ಮಾಹಿತಿ, SDK ಆವೃತ್ತಿ, ಸಿಸ್ಟಂ ಅಪ್‌ಡೇಟ್ ಸೆಟ್ಟಿಂಗ್‌ಗಳು, ಆ್ಯಪ್ ಸೆಟ್ಟಿಂಗ್‌ಗಳು (ಪ್ರದೇಶ, ಭಾಷೆ, ಸಮಯ ವಲಯ, ಫಾಂಟ್), ಆ್ಯಪ್ ಮುನ್ನೆಲೆಯನ್ನು ಪ್ರವೇಶಿಸಿದ/ನಿರ್ಗಮಿಸಿದ ಸಮಯ ಮತ್ತು ಆ್ಯಪ್ ಸ್ಟೇಟಸ್ ರೆಕಾರ್ಡ್ (ಉದಾ. ಡೌನ್‌ಲೋಡ್ ಆಗುವುದು, ಇನ್‌ಸ್ಟಾಲ್ ಆಗುವುದು, ಅಪ್‌ಡೇಟ್ ಆಗುವುದು, ಅಳಿಸುವುದು).
• ಯಾವುದೇ Xiaomi ಸಿಸ್ಟಂ ಸೇವೆ ಬಳಸಿದಾಗ ಉತ್ಪತ್ತಿಯಾಗುವ ಮಾಹಿತಿ, Xiaomi ಸಮುದಾಯದಲ್ಲಿರುವ ನಿಮ್ಮ ಬ್ಯಾಡ್ಜ್‌ಗಳು, ರೇಟಿಂಗ್‌ಗಳು, ಸೈನ್-ಇನ್ ಮಾಹಿತಿ ಮತ್ತು ಬ್ರೌಸಿಂಗ್ ಇತಿಹಾಸ; Xiaomi ಸಮುದಾಯದಲ್ಲಿರುವ ನಿಮ್ಮ ಸಂದೇಶಗಳು (ಕಳುಹಿಸಿದ ಹಾಗೂ ಸ್ವೀಕರಿಸಿದ ಪಾರ್ಟಿಗಳಿಗೆ ಮಾತ್ರ ಕಾಣಿಸುತ್ತದೆ); ಸಂಗೀತ ಸೇವೆಗಳಲ್ಲಿರುವ ನಿಮ್ಮ ಆಡಿಯೊ ಪ್ಲೇಬ್ಯಾಕ್ ಇತಿಹಾಸ ಹಾಗೂ ಹುಡುಕಾಟ ಕ್ವೇರಿಗಳು; ಥೀಮ್‌ಗಳು ಸೇವೆಗಳಲ್ಲಿರುವ ನಿಮ್ಮ ಲೈಕ್‌ಗಳು, ಕಾಮೆಂಟ್‌ಗಳು, ಮೆಚ್ಚಿನವುಗಳು, ಹಂಚಿಕೊಂಡವು, ಹುಡುಕಾಟ ಕ್ವೇರಿಗಳು; ಆ್ಯಪ್ ವೋಲ್ಟ್‌ನಲ್ಲಿರುವ ಸಿಸ್ಟಂ ಭಾಷೆಗಳು, ರಾಷ್ಟ್ರ ಹಾಗೂ ಸ್ಥಳ, ನೆಟ್‌ವರ್ಕ್ ಸ್ಟೇಟಸ್ ಹಾಗೂ ಆ್ಯಪ್‌ಗಳ ಪಟ್ಟಿ; ವಾಲ್‌ಪೇಪರ್ ಕರೋಸಲ್‌ನಲ್ಲಿರುವ, ಸ್ಥಳ, ಐಪಿ, ಸಂಬಂಧಿತ ಕಂಟೆಂಟ್ ಪೂರೈಕೆದಾರರು, ವಾಲ್‌ಪೇಪರ್ ಬದಲಾವಣೆ ಫ್ರೀಕ್ವೆನ್ಸಿ, ಚಿತ್ರ ವೀಕ್ಷಣೆಗಳು, ಚಿತ್ರ ಬ್ರೌಸಿಂಗ್ ಮೋಡ್, ಚಿತ್ರ ಬ್ರೌಸಿಂಗ್ ಅವಧಿ, ಆರ್ಟಿಕಲ್‌ಗಳ ಎಕ್ಸ್‌ಪೋಸರ್, ಸಬ್‌ಸ್ಕ್ರಿಪ್ಶನ್‌ಗಳನ್ನು ಒಳಗೊಂಡಂತೆ ನಿಮ್ಮ ಬಳಕೆ ಮಾಹಿತಿ.
• ಸ್ಥಳದ ಮಾಹಿತಿ (ನಿರ್ದಿಷ್ಟ ಸೇವೆಗಳು/ಫೀಚರ್‌ಗಳಿಗೆ ಮಾತ್ರ): ನೀವು ಸ್ಥಳ-ಸಂಬಂಧಿತ ಸೇವೆಗಳನ್ನು ಬಳಸಿದರೆ ನಿಮ್ಮ ನಿಖರ ಅಥವಾ ಅಂದಾಜು ಸ್ಥಳದ ಕುರಿತು ವಿವಿಧ ರೀತಿಯ ಮಾಹಿತಿ (ನ್ಯಾವಿಗೇಶನ್ ಸಾಫ್ಟ್‌ವೇರ್, ಹವಾಮಾನ ಸಾಫ್ಟ್‌ವೇರ್ ಮತ್ತು ಡಿವೈಸ್-ಪತ್ತೆ ಮಾಡುವಿಕೆ ಕಾರ್ಯದೊಂದಿಗಿನ ಸಾಫ್ಟ್‌ವೇರ್). ಈ ಮಾಹಿತಿ ಪ್ರದೇಶ, ದೇಶದ ಕೋಡ್, ನಗರ ಕೋಡ್, ಮೊಬೈಲ್ ನೆಟ್‌ವರ್ಕ್ ಕೋಡ್, ಮೊಬೈಲ್‌ನ ದೇಶದ ಕೋಡ್, ಸೆಲ್ ಗುರುತು, ಅಕ್ಷಾಂಶ ಮತ್ತು ರೇಖಾಂಶ ಮಾಹಿತಿ, ಸಮಯದ ವಲಯ ಸೆಟ್ಟಿಂಗ್‌ಗಳು ಮತ್ತು ಭಾಷೆಯ ಸೆಟ್ಟಿಂಗ್‌ಗಳನ್ನು ಒಳಗೊಂಡಿರಬಹುದು. ಸೆಟ್ಟಿಂಗ್‌ಗಳು > ಆ್ಯಪ್‌ಗಳು > ಅನುಮತಿಗಳು > ಅನುಮತಿಗಳು > ಸ್ಥಳ ನಲ್ಲಿ ನೀವು ಯಾವುದೇ ಸಮಯದಲ್ಲಿ ಸ್ಥಳ ಮಾಹಿತಿಗೆ ಇರುವ ಪ್ರತ್ಯೇಕ ಆ್ಯಪ್‌ಗಳ ಆ್ಯಕ್ಸೆಸ್ ಅನ್ನು ನಿರ್ಬಂಧಿಸಬಹುದು.
• ಲಾಗ್ ಮಾಹಿತಿ: ನಿರ್ದಿಷ್ಟ ಕಾರ್ಯಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ನಿಮ್ಮ ಬಳಕೆಯ ಕುರಿತು ಮಾಹಿತಿ. ಇದು, ಕುಕೀಗಳು ಮತ್ತು ಇತರ ಗುರುತಿಸುವಿಕೆ ತಂತ್ರಜ್ಞಾನಗಳು, ಐಪಿ ವಿಳಾಸಗಳು, ನೆಟ್‌ವರ್ಕ್ ವಿನಂತಿ ಮಾಹಿತಿ, ತಾತ್ಕಾಲಿಕ ಸಂದೇಶದ ಇತಿಹಾಸ, ಪ್ರಮಾಣಿತ ಸಿಸ್ಟಂ ಲಾಗ್‌ಗಳು, ಕ್ರ್ಯಾಶ್ ಮಾಹಿತಿ, ಸೇವೆಗಳನ್ನು ಬಳಸುವ ಮೂಲಕ ರಚನೆಯಾದ ಲಾಗ್ ಮಾಹಿತಿಗಳನ್ನು ಒಳಗೊಂಡಿರಬಹುದು (ಉದಾಹರಣೆಗೆ ನೋಂದಣಿ ಸಮಯ, ಪ್ರವೇಶದ ಸಮಯ, ಚಟುವಟಿಕೆ ಸಮಯ, ಇತ್ಯಾದಿ).
• ಇತರೆ ಮಾಹಿತಿ: ಪರಿಸರ ಗುಣಲಕ್ಷಣ ಮೌಲ್ಯ (ECV) (ಅಂದರೆ, Xiaomi ಖಾತೆ ಐಡಿ, ಡಿವೈಸ್ ಐಡಿ, ಕನೆಕ್ಟ್ ಆಗಿರುವ ವೈ-ಫೈ ಐಡಿ ಮತ್ತು ಸ್ಥಳ ಮಾಹಿತಿಯಿಂದ ಉತ್ಪನ್ನವಾಗುವ ಮೌಲ್ಯ).
1.1.3 ಥರ್ಡ್-ಪಾರ್ಟಿ ಮೂಲಗಳಿಂದ ಮಾಹಿತಿ
ಕಾನೂನು ಅನುಮತಿಸಿದಾಗ, ನಾವು ಥರ್ಡ್-ಪಾರ್ಟಿ ಮೂಲಗಳಿಂದ ನಿಮ್ಮ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ:
• ನಿಮ್ಮ ದೃಢೀಕರಣದೊಂದಿಗೆ ಖಾತೆ ಮತ್ತು ಹಣಕಾಸಿನ ವಹಿವಾಟುಗಳನ್ನು ಒಳಗೊಂಡಿರುವ ಕೆಲವು ಸೇವೆಗಳಿಗಾಗಿ, ಸುರಕ್ಷತೆ ಮತ್ತು ವಂಚನೆ ತಡೆಗಟ್ಟುವ ಉದ್ದೇಶಗಳಿಗಾಗಿ ಕಾನೂನುಬದ್ಧ ಥರ್ಡ್-ಪಾರ್ಟಿ ಮೂಲಗಳ ಮೂಲಕ ನೀವು ಒದಗಿಸಿದ ಮಾಹಿತಿಯನ್ನು (ಉದಾಹರಣೆಗೆ ಫೋನ್ ಸಂಖ್ಯೆ) ನಾವು ಮೌಲ್ಯೀಕರಿಸಬಹುದಾಗಿದೆ;
• ಜಾಹೀರಾತು ಮಾಡೆಲ್ ಆಪ್ಟಿಮೈಸೇಶನ್, ಉದ್ದೇಶಿತ ಅನನ್ಯ ಗುರುತಿಸುವಿಕೆಗಳ (ಉದಾಹರಣೆಗೆ, ಜಾಹೀರಾತುದಾರರಿಂದ ಪಡೆದುಕೊಳ್ಳಲಾದ IMEI/OAID/GAID) ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು, ಕೆಲವು ಸಂದರ್ಭಗಳಲ್ಲಿ, ನಿಮ್ಮ ಜಾಹೀರಾತು ಸೇವೆಗಳ ಬಳಕೆಗೆ ಪೂರಕವಾಗಿರುವ ಭಾಗಶಃ ಪರಿವರ್ತನೆ ಕಾರ್ಯದಕ್ಷತೆ ಡೇಟಾವನ್ನು (ಕ್ಲಿಕ್‌ಗಳಂತೆ) ಕೂಡ ಜಾಹೀರಾತು ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ.
• ಥರ್ಡ್-ಪಾರ್ಟಿ ಸಾಮಾಜಿಕ ನೆಟ್‌ವರ್ಕ್ ಸೇವೆಗಳ ಮೂಲಕ ನಾವು ಖಾತೆ ಐಡಿ, ಅಡ್ಡಹೆಸರುಗಳು, ಪ್ರೊಫೈಲ್ ಫೋಟೋ ಹಾಗೂ ಇಮೇಲ್ ವಿಳಾಸಗಳಂಥ ಕೆಲವು ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ (ಉದಾ. Xiaomi ಸೇವೆಗೆ ಲಾಗ್ ಇನ್ ಮಾಡಲು ನೀವು ಸಾಮಾಜಿಕ ನೆಟ್‌ವರ್ಕ್ ಖಾತೆಯನ್ನು ಬಳಸಿದಾಗ).
• ಇತರರು ನಮಗೆ ಒದಗಿಸಿದ ನಿಮ್ಮನ್ನು ಕುರಿತ ಮಾಹಿತಿ, ಅಂದರೆ mi.com ಸೇವೆಗಳ ಮೂಲಕ ನಿಮಗಾಗಿ ಉತ್ಪನ್ನಗಳನ್ನು ಖರೀದಿಸಿದಾಗ ಇತರ ಬಳಕೆದಾರರು ನಮಗೆ ನೀಡಿರಬಹುದಾದ ನಿಮ್ಮ ತಲುಪಿಸುವ ವಿಳಾಸ.
1.1.4 ಗುರುತಿಸಲಾಗದ ಮಾಹಿತಿ
ಒಬ್ಬ ವ್ಯಕ್ತಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧವಿಲ್ಲದ ಇತರೆ ರೀತಿಯ ಮಾಹಿತಿಯನ್ನು ಸಹ ನಾವು ಸಂಗ್ರಹಿಸಬೇಕಾಗಬಹುದು ಮತ್ತು ಆ ಮಾಹಿತಿ ಅನ್ವಯವಾಗುವ ಸ್ಥಳೀಯ ಕಾನೂನುಗಳ ಪ್ರಕಾರ "ವೈಯಕ್ತಿಕ ಮಾಹಿತಿ" ಎಂದು ಪರಿಗಣಿಸದೇ ಇರಬಹುದು. ಈ ಬಗೆಯ ಮಾಹಿತಿಯನ್ನು ವೈಯಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿ ಎಂದು ಪರಿಗಣಿಸಲಾಗುತ್ತದೆ. ನಾವು ಆ ವೈಯಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿಯನ್ನು ಸಂಗ್ರಹಿಸಬಹುದು, ಬಳಸಬಹುದು, ವರ್ಗಾಯಿಸಬಹುದು ಹಾಗೂ ಬಹಿರಂಗಗೊಳಿಸಬಹುದು. ನಾವು ಸಂಗ್ರಹಿಸುವ ಮಾಹಿತಿ ಮತ್ತು ಅವುಗಳನ್ನು ವೈಯುಕ್ತಿಕವಲ್ಲದ ಗುರುತಿಸಬಹುದಾದ ಸಮಗ್ರ ಫಾರ್ಮ್ಯಾಟ್ ಆಗಿ ಹೇಗೆ ಬಳಸುತ್ತೇವೆ ಎಂಬುದರ ಉದಾಹರಣೆಗಳು ಇಲ್ಲಿವೆ:
• ನೀವು ನಿರ್ದಿಷ್ಟ ಸೇವೆಯನ್ನು ಬಳಸಿದಾಗ (ಉದಾ, ವೈಯುಕ್ತಿಕವಲ್ಲದ ಗುರುತಿಸಬಹುದಾದ ಡಿವೈಸ್ ಸಂಬಂಧಿತ ಮಾಹಿತಿ, ದೈನಂದಿನ ಬಳಕೆ, ಪುಟ ವೀಕ್ಷಣೆಗಳು, ಪುಟ ವೀಕ್ಷಣೆ ಪ್ರವೇಶ ಸಮಯ ಮತ್ತು ಸೆಶನ್‌ಗಳು) ಉತ್ಪತ್ತಿಯಾಗುವ ಅಂಕಿ-ಅಂಶಗಳ ಡೇಟಾವನ್ನು ಒಳಗೊಳ್ಳಬಹುದು;
• ನೆಟ್‌ವರ್ಕ್ ಮಾನಿಟರಿಂಗ್ ಡೇಟಾ (ಉದಾ, ವಿನಂತಿ ಸಮಯ, ವಿನಂತಿಗಳ ಅಥವಾ ದೋಷ ವಿನಂತಿಗಳ ಸಂಖ್ಯೆ.);
• ಆ್ಯಪ್ ಕ್ರ್ಯಾಶ್ ಈವೆಂಟ್‌ಗಳು (ಉದಾ, ಆ್ಯಪ್ ಕ್ರ್ಯಾಶ್‌ಗಳಾದ ಬಳಿಕ ತಾನಾಗಿಯೇ ಉತ್ಪತ್ತಿಯಾದ ಲಾಗ್‌ಗಳು).
ನಾವು ನಿಮಗೆ ನೀಡುವ ಸೇವೆಗಳನ್ನು ಸುಧಾರಿಸುವುದು ಅಂತಹ ಸಂಗ್ರಹಣೆಯ ಉದ್ದೇಶವಾಗಿದೆ. ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ಮತ್ತು ಪ್ರಮಾಣವು ನೀವು ನಮ್ಮ ಉತ್ಪನ್ನಗಳನ್ನು ಮತ್ತು/ಅಥವಾ ಸೇವೆಗಳನ್ನು ಹೇಗೆ ಬಳಸುತ್ತೀರಿ ಎಂಬುದನ್ನು ಆಧರಿಸಿರುತ್ತದೆ.
ನಿಮಗೆ ಹೆಚ್ಚಿನ ಉಪಯುಕ್ತ ಮಾಹಿತಿಯನ್ನು ಒದಗಿಸಲು, ನಮ್ಮ ವೆಬ್‌ಸೈಟ್‌ಗಳು, ಉತ್ಪನ್ನಗಳು ಮತ್ತು ಸೇವೆಗಳ ಯಾವ ಭಾಗದಲ್ಲಿ ನೀವು ಹೆಚ್ಚು ಆಸಕ್ತರಾಗಿರುವಿರಿ ಎಂಬುದನ್ನು ಅರ್ಥೈಸಿಕೊಳ್ಳಲು ನಾವು ಅಂತಹ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ದಿನವೊಂದರಲ್ಲಿ ಸಕ್ರಿಯವಾಗಿರುವ ಬಳಕೆದಾರರ ಸಂಖ್ಯೆಯಷ್ಟೇ ನಮಗೆ ತಿಳಿಯಬೇಕಾಗಬಹುದು; ಮತ್ತು, ಆ ದಿನ ಯಾರೆಲ್ಲಾ ಸಕ್ರಿಯರಾಗಿದ್ದರು ಎಂಬ ಮಾಹಿತಿ ನಮಗೆ ಅವಶ್ಯಕತೆ ಇಲ್ಲ. ಆದ್ದರಿಂದ, ಅಂಕಿ-ಅಂಶಗಳ ವಿಶ್ಲೇಷಣೆಗೆ ಸಮಗ್ರ ಡೇಟಾ ಸಾಕು. ನಿಮ್ಮ ವೈಯಕ್ತಿಕ ಡೇಟಾವನ್ನು ವ್ಯಯಕ್ತಿಕವಲ್ಲದ ಗುರುತು ಮಾಡುವಿಕೆ ಮಾಹಿತಿಯಿಂದ ಬೇರ್ಪಡಿಸಲು ನಾವು ಅವಿರತ ಶ್ರಮಿಸುತ್ತೇವೆ ಮತ್ತು ಎರಡು ಪ್ರಕಾರದ ಡೇಟಾಗಳನ್ನು ಪ್ರತ್ಯೇಕವಾಗಿ ಬಳಸುವುದನ್ನು ನಿಮಗೆ ಖಾತ್ರಿಪಡಿಸುತ್ತೇವೆ. ಆದರೂ, ವೈಯುಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿಯನ್ನು ವೈಯಕ್ತಿಕ ಮಾಹಿತಿಯೊಂದಿಗೆ ಒಂದುಗೂಡಿಸಿದರೆ, ಅಂಥ ಒಗ್ಗೂಡಿಸಿದ ಮಾಹಿತಿಯನ್ನು, ಅದು ಒಂದಾಗಿರುವ ತನಕ, ಅದನ್ನು ವೈಯಕ್ತಿಕ ಮಾಹಿತಿ ಎಂದೇ ಪರಿಗಣಿಸಲಾಗುತ್ತದೆ.
1.2 ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ
ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶವು ನಿಮಗೆ ಉತ್ಪನ್ನಗಳು ಮತ್ತು/ಅಥವಾ ಸೇವೆಗಳನ್ನು ಒದಗಿಸುವುದು. ಮತ್ತು, ಅನ್ವಯಿಸುವ ಕಾನೂನುಗಳು, ನಿಯಮಗಳು ಮತ್ತು ಇತರೆ ನಿಯಂತ್ರಕ ಅವಶ್ಯಕತೆಗಳನ್ನು ನಾವು ಅನುಸರಿಸುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಇವುಗಳನ್ನು ಒಳಗೊಂಡಿರುತ್ತದೆ:
• ನಮ್ಮ ಉತ್ಪನ್ನಗಳು ಮತ್ತು/ಅಥವಾ ಸೇವೆಗಳನ್ನು ನಿಮಗೆ ಒದಗಿಸುವುದು, ಪ್ರಕ್ರಿಯೆಗೊಳಿಸುವುದು, ನಿರ್ವಹಿಸುವುದು, ಸುಧಾರಿಸುವುದು ಮತ್ತು ಅಭಿವೃದ್ಧಿಪಡಿಸುವುದು, ಉದಾಹರಣೆಗೆ, ತಲುಪಿಸುವುದು, ಸಕ್ರಿಯಗೊಳಿಸುವುದು, ಪರಿಶೀಲಿಸುವುದು, ಮಾರಾಟಗಳ ನಂತರದ ಬೆಂಬಲ, ಗ್ರಾಹಕರ ಬೆಂಬಲ ಮತ್ತು ಜಾಹೀರಾತು ನೀಡುವುದು.
• ನಷ್ಟ ಮತ್ತು ವಂಚನೆಯನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಭದ್ರತಾ ಸುರಕ್ಷತೆಗಳನ್ನು ಜಾರಿಗೊಳಿಸುವುದು ಮತ್ತು ನಿರ್ವಹಿಸುವುದು, ಉದಾಹರಣೆಗೆ, ಬಳಕೆದಾರರ ಗುರುತಿಸುವಿಕೆಗೆ ಸಹಾಯ ಮಾಡುವುದು ಮತ್ತು ಬಳಕೆದಾರರ ಗುರುತನ್ನು ಪರಿಶೀಲಿಸುವುದು. ಕೆಳಗಿನ ಎರಡು ಷರತ್ತುಗಳಿಗೆ ಬದ್ಧವಾಗಿದ್ದಾಗ ಮಾತ್ರ ನಿಮ್ಮ ಮಾಹಿತಿಯನ್ನು ವಂಚನೆ-ವಿರೋಧಿ ಉದ್ದೇಶಗಳಿಗಾಗಿ ನಾವು ಬಳಸುತ್ತೇವೆ: ಇದು ಅವಶ್ಯಕವಾಗಿರಬೇಕು, ಮತ್ತು ಮೌಲ್ಯಮಾಪನಕ್ಕಾಗಿ ಬಳಸುವ ಡೇಟಾವು ಬಳಕೆದಾರರು ಮತ್ತು ಸೇವೆಗಳನ್ನು ರಕ್ಷಿಸಲು Xiaomi ಕಾನೂನುಬದ್ಧ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕು.
• ನಿಮ್ಮ ಡಿವೈಸ್ ಮತ್ತು ಸೇವೆಗಳ ಕುರಿತ ಪ್ರಶ್ನೆಗಳು ಅಥವಾ ವಿನಂತಿಗಳನ್ನು ನಿರ್ವಹಿಸುವುದು, ಉದಾಹರಣೆಗೆ, ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು, ಸಿಸ್ಟಂ ಮತ್ತು ಆ್ಯಪ್ ನೋಟಿಫಿಕೇಶನ್‌ಗಳನ್ನು ಕಳುಹಿಸುವುದು, ಈವೆಂಟ್‌ಗಳು ಮತ್ತು ಪ್ರಮೋಷನ್‌ಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು (ಉದಾ, ಸ್ವೀಪ್‌ಸ್ಟೇಕ್ಸ್).
• ಸಂಬಂಧಿತ ಪ್ರೊಮೋಷನಲ್ ಚಟುವಟಿಕೆಗಳನ್ನು ನಡೆಸುವುದು, ಅಂದರೆ ಮಾರ್ಕೇಟಿಂಗ್ ಹಾಗೂ ಪ್ರಮೋಷನಲ್ ವಸ್ತುಗಳನ್ನು ಹಾಗೂ ಅಪ್‌ಡೇಟ್‌ಗಳನ್ನು ಒದಗಿಸುವುದು. ಕೆಲವು ಪ್ರಕಾರದ ಪ್ರಮೋಷನಲ್ ವಸ್ತುಗಳನ್ನು ಸ್ವೀಕರಿಸಲು ನಿಮಗೆ ಇಷ್ಟವಿಲ್ಲ ಎಂದಾದಾಗ, ಅನ್ವಯವಾಗುವ ಕಾನೂನುಗಳಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸದ ಹೊರತು, ಸಂದೇಶದಲ್ಲಿ ನೀಡಿದ ವಿಧಾನದ ಮೂಲಕ ಹೊರಹೋಗಬಹುದು (ಎಂದರೆ, ಸಂದೇಶದ ಕೆಳಗಿರುವ ಅನ್‌ಸಬ್‌ಸ್ಕ್ರೈಬ್ ಲಿಂಕ್). ದಯವಿಟ್ಟು ಕೆಳಗಿರುವ “ನಿಮ್ಮ ಹಕ್ಕುಗಳು” ಅನ್ನು ನೋಡಿ.
• ಆಂತರಿಕ ಉದ್ದೇಶಗಳು, ಉದಾಹರಣೆಗೆ, ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಸುಧಾರಿಸಲು ನಮ್ಮ ಉತ್ಪನ್ನಗಳು ಅಥವಾ ಸೇವೆಗಳ ಬಳಕೆಗೆ ಸಂಬಂಧಿಸಿದ ಅಂಕಿ-ಅಂಶದ ಮಾಹಿತಿಯ ಡೇಟಾ ವಿಶ್ಲೇಷಣೆ, ಸಂಶೋಧನೆ ಮತ್ತು ಅಭಿವೃದ್ಧಿ. ಉದಾಹರಣೆಗೆ, ಡಿ-ಐಡೆಂಟಿಫಿಕೇಶನ್ ಪ್ರಕ್ರಿಯೆಯ ನಂತರ ಯಂತ್ರ ಕಲಿಕೆ ಅಥವಾ ಮಾದರಿ ಅಲ್ಗಾರಿದಮ್ ತರಬೇತಿಯನ್ನು ನಡೆಸಲಾಗುತ್ತದೆ.
• ನಿಮ್ಮ ಡಿವೈಸ್‌ನ ಕಾರ್ಯಕ್ಷಮತೆಯನ್ನು ಆಪ್ಟಿಮೈಸ್ ಮಾಡುವುದು, ಉದಾಹರಣೆಗೆ, ಮೆಮೊರಿ ಬಳಕೆ ಅಥವಾ ನಿಮ್ಮ ಆ್ಯಪ್‌ನ CPU ಬಳಕೆಯನ್ನು ವಿಶ್ಲೇಷಿಸುವುದು.
• ನಮ್ಮ ವ್ಯವಹಾರ ಕಾರ್ಯಗಳಿಗೆ ನಿಮಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು (ಉದಾಹರಣೆಗೆ ವ್ಯಾಪಾರ ಅಂಕಿ-ಅಂಶಗಳು) ಅಥವಾ ನಮ್ಮ ಕಾನೂನು ಬಾಧ್ಯತೆಗಳನ್ನು ಈಡೇರಿಸುವ ಉದ್ದೇಶಕ್ಕಾಗಿ.
• Xiaomi ಯ ಕಾನೂನುಬದ್ಧ ಹಿತಾಸಕ್ತಿಯ ಆಧಾರದ ಮೇಲೆ ಪ್ರಕ್ರಿಯೆಗೊಳಿಸುವುದು (ಅನ್ವಯವಾಗುವ ವ್ಯಾಪ್ತಿಗಳು, ಉದಾಹರಣೆಗೆ, GDPR ಅಡಿಯಲ್ಲಿ). ಕಾನೂನುಬದ್ಧ ಹಿತಾಸಕ್ತಿಗಳು ಎಂದರೆ ಅವು, ನಮ್ಮ ವ್ಯವಹಾರವನ್ನು ಪರಿಣಾಮಕಾರಿಯಾಗಿ ನಡೆಸುವ ಹಾಗೂ ನಿರ್ವಹಿಸುವ ಸಾಮರ್ಥ್ಯವನ್ನು ನಮಗೆ ನೀಡುವುದು ಹಾಗೂ ನಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವುದು; ನಮ್ಮ ವ್ಯವಹಾರ, ಸಿಸ್ಟಂಗಳು, ಉತ್ಪನ್ನಗಳು, ಸೇವೆಗಳು ಹಾಗೂ ಕಸ್ಟಮರ್‌ಗಳ ಭದ್ರತೆಯನ್ನು ರಕ್ಷಿಸುವುದು (ಹಾನಿ ತಪ್ಪಿಸುವುದು ಹಾಗೂ ವಂಚನೆ ವಿರೋಧಿ ಉದ್ದೇಶಗಳು); ಆಂತರಿಕ ನಿರ್ವಹಣೆ; ಆಂತರಿಕ ನೀತಿಗಳು ಹಾಗೂ ಪ್ರಕ್ರಿಯೆಗಳಿಗೆ ಬದ್ಧವಾಗಿರುವುದು; ಹಾಗೂ ನೀತಿಯಲ್ಲಿ ವಿವರಿಸಿದ ಇತರೆ ಕಾನೂನುಬದ್ಧ ಹಿತಾಸಕ್ತಿಗಳನ್ನು ಇದು ಒಳಗೊಂಡಿರುತ್ತದೆ.
ಉದಾಹರಣೆಗೆ, ನಮ್ಮ ಸೇವೆಗಳ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು, ನಮ್ಮ ಆ್ಯಪ್‌ಗಳ ಕಾರ್ಯದಕ್ಷತೆಯನ್ನು ಅರ್ಥ ಮಾಡಿಕೊಳ್ಳಲು, ನಿಮ್ಮ ಬಳಕೆಯ ಫ್ರೀಕ್ವೆನ್ಸಿ, ಕ್ರ್ಯಾಶ್ ಲಾಗ್ ಮಾಹಿತಿ, ಒಟ್ಟಾರೆ ಬಳಕೆ, ಕಾರ್ಯದಕ್ಷತೆ ಡೇಟಾ ಮತ್ತು ಆ್ಯಪ್ ಮೂಲದಂಥ ಪ್ರಸ್ತುತ ಮಾಹಿತಿಯನ್ನು ನಾವು ರೆಕಾರ್ಡ್ ಮಾಡಿಕೊಳ್ಳಬಹುದು. ಅನಧಿಕೃತ ಮಾರಾಟಗಾರರು ಡಿವೈಸ್‌ಗಳನ್ನು ಅನ್‌ಲಾಕ್ ಮಾಡುವುದರಿಂದ ತಡೆಯಲು, ನಾವು Xiaomi ಖಾತೆ ಐಡಿ, ಕ್ರಮ ಸಂಖ್ಯೆ ಮತ್ತು ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್‌ನ ಐಪಿ ವಿಳಾಸಗಳನ್ನು ಹಾಗೂ ನಿಮ್ಮ ಮೊಬೈಲ್ ಡಿವೈಸ್‌ನ ಡಿವೈಸ್ ಮಾಹಿತಿಯನ್ನು ಸಂಗ್ರಹಿಸಬಹುದು.
• ಸ್ಥಳೀಯ ಸೇವೆಗಳನ್ನು ಒದಗಿಸುವುದು , ಇದಕ್ಕೆ ನಮ್ಮ ಸರ್ವರ್‌ಗಳೊಂದಿಗಿನ ಸಂವಹನದ ಅಗತ್ಯವಿರುವುದಿಲ್ಲ, ಉದಾಹರಣೆಗೆ, ನಿಮ್ಮ ಡಿವೈಸ್‌ನಲ್ಲಿ ಟಿಪ್ಪಟಿ ಬಳಸುವಿಕೆ.
• ನಿಮ್ಮ ಸಮ್ಮತಿಯೊಂದಿಗೆ ಇತರೆ ಉದ್ದೇಶಗಳು.
ನಿಮ್ಮ ಮಾಹಿತಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಕುರಿತು ಹೆಚ್ಚು ವಿವರವಾದ ಉದಾಹರಣೆಗಳು ಇಲ್ಲಿವೆ (ಇದು ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರಬಹುದು):
• ನಿಮ್ಮ ಖರೀದಿಸಲಾದ Xiaomi ಉತ್ಪನ್ನಗಳು ಅಥವಾ ಸೇವೆಗಳನ್ನು ನಿಮಗಾಗಿ ಸಕ್ರಿಯಗೊಳಿಸುವುದು ಮತ್ತು ನೋಂದಾಯಿಸುವುದು.
• ನಿಮ್ಮ Xiaomi ಖಾತೆ ರಚಿಸುವುದು ಹಾಗೂ ನಿರ್ವಹಿಸುವುದು. ನಮ್ಮ ವೆಬ್‌ಸೈಟ್‌ನಲ್ಲಿ ಅಥವಾ ನಮ್ಮ ಮೊಬೈಲ್ ಡಿವೈಸ್‌ನ ಮೂಲಕ Xiaomi ಖಾತೆಯನ್ನು ರಚಿಸಿದಾಗ ಸಂಗ್ರಹಿಸಲಾದ ವೈಯಕ್ತಿಕ ಮಾಹಿತಿಯನ್ನು ನಿಮಗಾಗಿ ವೈಯಕ್ತಿಕ Xiaomi ಖಾತೆ ಮತ್ತು ಪ್ರೊಫೈಲ್ ಪುಟವನ್ನು ರಚಿಸಲು ಬಳಸಲಾಗುತ್ತದೆ.
• ನಿಮ್ಮ ಖರೀದಿಯ ಆರ್ಡರ್ ಪ್ರಕ್ರಿಯೆಗೊಳಿಸುವಿಕೆ. ಇ-ವಾಣಿಜ್ಯ ಆರ್ಡರ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಖರೀದಿ ಆರ್ಡರ್ ಅನ್ನು ಪ್ರಕ್ರಿಯೆಗೊಳಿಸಲು ಮತ್ತು ಗ್ರಾಹಕರ ಬೆಂಬಲ ಮತ್ತು ಮರು-ವಿತರಣೆ ಸೇರಿದಂತೆ ಮಾರಾಟದ ನಂತರದ ಸೇವೆಗಳಿಗೆ ಬಳಸಲಾಗುತ್ತದೆ. ಇದರೊಂದಿಗೆ, ವಿತರಣೆ ಪಾಲುದಾರರೊಂದಿಗೆ ಆರ್ಡರ್ ಅನ್ನು ಪರಿಶೀಲಿಸಲು ಮತ್ತು ಪಾರ್ಸೆಲ್‌ನ ವಿತರಣೆಯನ್ನು ದಾಖಲಿಸಲು ಸಹ ಆರ್ಡರ್ ಸಂಖ್ಯೆಯನ್ನು ಬಳಸಲಾಗುತ್ತದೆ. ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಪೋಸ್ಟಲ್ ಕೋಡ್ ಸೇರಿದಂತೆ ಸ್ವೀಕರಿಸುವವರ ಮಾಹಿತಿಯನ್ನು ವಿತರಣೆಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ನಿಮಗೆ ಪಾರ್ಸೆಲ್ ಟ್ರ್ಯಾಕಿಂಗ್ ಮಾಹಿತಿಯನ್ನು ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ಬಳಸಲಾಗುತ್ತದೆ. ಖರೀದಿಸಿದ ಐಟಂಗಳ ಪಟ್ಟಿಯನ್ನು ಇನ್‌ವಾಯ್ಸ್ ಪ್ರಿಂಟ್ ಮಾಡಲು ಬಳಸಲಾಗುತ್ತದೆ ಮತ್ತು ಪಾರ್ಸೆಲ್‌ನಲ್ಲಿ ಯಾವ ಐಟಂಗಳಿವೆ ಎಂಬುದನ್ನು ನೋಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ.
• Xiaomi ಸಮುದಾಯದಲ್ಲಿ ಪಾಲ್ಗೊಳ್ಳುವುದು. Xiaomi ಸಮುದಾಯಕ್ಕೆ ಅಥವಾ ಇತರೆ Xiaomi ಇಂಟರ್‌ನೆಟ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಪ್ರೊಫೈಲ್ ಪುಟದ ಡಿಸ್‌ಪ್ಲೇಗೆ, ಇತರ ಬಳಕೆದಾರರೊಂದಿಗಿನ ಸಂವಹನಕ್ಕೆ ಮತ್ತು Xiaomi ಸಮುದಾಯದಲ್ಲಿ ಪಾಲ್ಗೊಳ್ಳಲು ಬಳಸಲಾಗುತ್ತದೆ.
• ಸಿಸ್ಟಂ ಸೇವೆಗಳ ಒದಗಿಸುವಿಕೆ. ಸಿಸ್ಟಂ ಸೇವೆಗಳನ್ನು ಸಕ್ರಿಯಗೊಳಿಸಲು ಈ ಕೆಳಗಿನ ಮಾಹಿತಿಯನ್ನು ಬಳಸಿಕೊಳ್ಳುತ್ತದೆ: GAID ಸಂಖ್ಯೆ, IMEI ಸಂಖ್ಯೆ, IMSI ಸಂಖ್ಯೆ, ಫೋನ್ ಸಂಖ್ಯೆ, ಡಿವೈಸ್ ಐಡಿ, ಡಿವೈಸ್‌ನ ಆಪರೇಟಿಂಗ್ ಸಿಸ್ಟಂ, MAC ವಿಳಾಸ, ಡಿವೈಸ್ ಪ್ರಕಾರ, ಸಿಸ್ಟಂ ಮತ್ತು ಕಾರ್ಯಕ್ಷಮತೆಯ ಮಾಹಿತಿ ಮತ್ತು ಮೊಬೈಲ್ ರಾಷ್ಟ್ರ ಕೋಡ್ ಸೇರಿದಂತೆ ಸ್ಥಳದ ಮಾಹಿತಿ, ಮೊಬೈಲ್ ನೆಟ್‌ವರ್ಕ್ ಕೋಡ್, ಸ್ಥಳ ಪ್ರದೇಶ ಕೋಡ್ ಮತ್ತು ಸೆಲ್ ಗುರುತು ಸೇರಿದಂತೆ ಡಿವೈಸ್ ಅಥವಾ ಸಿಮ್ ಕಾರ್ಡ್ ಸಂಬಂಧಿತ ಮಾಹಿತಿ.
• ಸಕ್ರಿಯಗೊಳಿಸುವಿಕೆ ವೈಫಲ್ಯಗಳನ್ನು ವಿಶ್ಲೇಷಿಸುವಿಕೆ. ಸೇವೆಯ ನೆಟ್‌ವರ್ಕ್ ಆಪರೇಟರ್ ಅನ್ನು ಗುರುತಿಸಲು ಮತ್ತು ಆ ವೈಫಲ್ಯವನ್ನು ನೆಟ್‌ವರ್ಕ್ ಆಪರೇಟರ್‌ಗೆ ವರದಿ ಮಾಡಲು ಸಿಮ್ ಕಾರ್ಡ್ ಸಕ್ರಿಯಗೊಳಿಸುವಿಕೆಯ ವೈಫಲ್ಯವನ್ನು (ಉದಾ. ಕಿರು ಸಂದೇಶ ಸೇವೆ (ಎಸ್‌ಎಂಎಸ್) ಗೇಟ್‌ವೇಗಳು ಮತ್ತು ನೆಟ್‌ವರ್ಕ್ ವೈಫಲ್ಯಗಳು) ಪ್ರವೇಶಿಸಲು ಸ್ಥಳ-ಸಂಬಂಧಿತ ಮಾಹಿತಿಯನ್ನು ಬಳಸಲಾಗುತ್ತದೆ.
• ಇತರೆ ಸಿಸ್ಟಂ ಸೇವೆಗಳನ್ನು ಒದಗಿಸುವಿಕೆ. ಸೇವಾ ಆಪ್ಟಿಮೈಸೇಶನ್ ಒದಗಿಸುವಾಗ Xiaomi ಸಿಸ್ಟಂ ಸೇವೆಗಳನ್ನು ಬಳಸುವಾಗ ಸಂಗ್ರಹಿಸಲಾದ ಮಾಹಿತಿಯನ್ನು ಆ ಸೇವೆಯ ಕಾರ್ಯಗಳನ್ನು ನಿರ್ವಹಿಸಲು ಬಳಸಲಾಗುತ್ತದೆ, ಉದಾ. Xiaomi ಸಿಸ್ಟಂ ಸೇವೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಡೌನ್‌ಲೋಡ್ ಮಾಡುವುದು, ಅಪ್‌ಡೇಟ್ ಮಾಡುವುದು, ನೋಂದಾಯಿಸುವುದು, ಕಾರ್ಯಗತಗೊಳಿಸುವುದು ಅಥವಾ ಉತ್ತಮಗೊಳಿಸುವುದು. ಉದಾಹರಣೆಗೆ, ಥೀಮ್ ಸ್ಟೋರ್ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯು ನಿಮ್ಮ ಡೌನ್‌ಲೋಡಿಂಗ್ ಮತ್ತು ಬ್ರೌಸಿಂಗ್ ಇತಿಹಾಸದ ಆಧಾರದ ಮೇಲೆ ವೈಯಕ್ತೀಕರಿಸಿದ ಥೀಮ್ ಶಿಫಾರಸು ಸೇವೆಗಳನ್ನು ಒದಗಿಸಬಹುದು.
• ನಿಮ್ಮ ಡಿವೈಸ್ ಹುಡುಕುವಿಕೆ. ನಿಮ್ಮ ಡಿವೈಸ್ ಕಳೆದುಹೋದರೆ ಅಥವಾ ಕಳ್ಳತನವಾದರೆ, Xiaomi ಯ 'ಡಿವೈಸ್ ಹುಡುಕು' ಫೀಚರ್ ನಿಮ್ಮ ಡಿವೈಸ್ ಅನ್ನು ಹುಡುಕಲು ಮತ್ತು ಸುರಕ್ಷಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ಡಿವೈಸ್ ಅನ್ನು ಅದರ ಸ್ಥಳ ಮಾಹಿತಿಯನ್ನು ಬಳಸಿಕೊಂಡು ಪತ್ತೆ ಮಾಡಬಹುದು, ಅದರಲ್ಲಿನ ಡೇಟಾವನ್ನು ದೂರದಿಂದಲೇ ಅಳಿಸಬಹುದು, ಅಥವಾ ಡಿವೈಸ್ ಅನ್ನು ಲಾಕ್ ಮಾಡಬಹುದು. ಡಿವೈಸ್ ಹುಡುಕಿ ಫೀಚರ್ ಬಳಸುವಾಗ, ನಿಮ್ಮ ಮೊಬೈಲ್ ಡಿವೈಸ್‌ನಿಂದ ಸ್ಥಳ ಮಾಹಿತಿಯನ್ನು ಸೆರೆಹಿಡಿಯಲಾಗುತ್ತದೆ; ಕೆಲವು ಸಂದರ್ಭಗಳಲ್ಲಿ, ಈ ಮಾಹಿತಿಯನ್ನು ಸೆಲ್ ಟವರ್‌ಗಳು ಅಥವಾ ವೈ-ಫೈ ಹಾಟ್‌ಸ್ಪಾಟ್‌ಗಳಿಂದ ಪಡೆಯಲಾಗುತ್ತದೆ. ನೀವು ಯಾವುದೇ ಕ್ಷಣದಲ್ಲಿ ಸೆಟ್ಟಿಂಗ್‌ಗಳು > Xiaomi ಖಾತೆ > Xiaomi ಕ್ಲೌಡ್ > ಡಿವೈಸ್ ಹುಡುಕು ನಲ್ಲಿ ಈ ಫೀಚರ್ ಅನ್ನು ಆನ್ ಅಥವಾ ಆಫ್ ಮಾಡಬಹುದು.
• ಫೋಟೋಗಳಲ್ಲಿ ಸ್ಥಳ ಮಾಹಿತಿಯನ್ನು ರೆಕಾರ್ಡ್ ಮಾಡುವಿಕೆ. ನೀವು ಫೋಟೋ ತೆಗೆದುಕೊಳ್ಳುವಾಗ ನಿಮ್ಮ ಸ್ಥಳ ಮಾಹಿತಿಯನ್ನು ರೆಕಾರ್ಡ್ ಮಾಡಿಕೊಳ್ಳಬಹುದು. ಈ ಮಾಹಿತಿಯು ನಿಮ್ಮ ಫೋಟೋ ಫೋಲ್ಡರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಥಳವನ್ನು ನಿಮ್ಮ ಪೋಟೋಗಳ ಮೆಟಾಡೇಟಾದಲ್ಲಿ ಉಳಿಸಲಾಗುತ್ತದೆ. ನೀವು ಫೋಟೋ ತೆಗೆದುಕೊಳ್ಳುವಾಗ ಸ್ಥಳವನ್ನು ರೆಕಾರ್ಡ್ ಮಾಡಲು ಬಯಸದಿದ್ದರೆ, ನೀವು ಅದನ್ನು ಡಿವೈಸ್‌ನಲ್ಲಿರುವ ಕ್ಯಾಮೆರಾ ಸೆಟ್ಟಿಂಗ್‌ಗಳಲ್ಲಿ ಯಾವುದೇ ಸಮಯದಲ್ಲಿ ಆಫ್ ಮಾಡಬಹುದು.
• ಸಂದೇಶ ಕಳುಹಿಸುವ ಫೀಚರ್‌ಗಳನ್ನು ಒದಗಿಸುವುದು (ಉದಾ. Mi Talk, Mi ಸಂದೇಶ). ನೀವು Mi ಟಾಕ್ ಅನ್ನು ಡೌನ್‌ಲೋಡ್ ಮಾಡಿದರೆ ಮತ್ತು ಬಳಸಿದರೆ, Mi ಟಾಕ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಈ ಸೇವೆಯನ್ನು ಸಕ್ರಿಯಗೊಳಿಸಲು ಮತ್ತು ಬಳಕೆದಾರರನ್ನು ಹಾಗೂ ಸಂದೇಶ ಸ್ವೀಕರಿಸುವವರನ್ನು ಗುರುತಿಸಲು ಬಳಸಬಹುದಾಗಿದೆ. ಇದರೊಂದಿಗೆ, ಬಳಕೆದಾರರು ಆ್ಯಪ್ ಅನ್ನು ಮರು-ಇನ್‌ಸ್ಟಾಲ್ ಮಾಡಿದ ನಂತರ ಚಾಟ್ ಇತಿಹಾಸವನ್ನು ಮರು-ಲೋಡ್ ಮಾಡುವ ಅನುಕೂಲಕ್ಕಾಗಿ ಅಥವಾ ಡಿವೈಸ್‌ಗಳಲ್ಲಿ ಸಿಂಕ್ರೊನೈಸೇಶನ್‌ಗಾಗಿ ಚಾಟ್ ಇತಿಹಾಸವನ್ನು ಸಂಗ್ರಹಿಸಲಾಗುತ್ತದೆ. Mi ಸಂದೇಶವು ತನ್ನ ಸೇವೆಗಳನ್ನು ಸಕ್ರಿಯಗೊಳಿಸಲು ಮತ್ತು ಸಂದೇಶಗಳ ರೂಟಿಂಗ್ ಒಳಗೊಂಡಂತೆ ಇತರ ಸೇವೆಯನ್ನು ಕಾರ್ಯನಿರ್ವಹಿಸುವಂತೆ ಮಾಡಲು ಕಳುಹಿಸುವವರ ಮತ್ತು ಸ್ವೀಕರಿಸುವವರ ಫೋನ್ ಸಂಖ್ಯೆಗಳು ಮತ್ತು Mi ಸಂದೇಶ ಐಡಿಗಳಯಂತಹ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ.
• ಸ್ಥಳ-ಆಧಾರಿತ ಸೇವೆಗಳನ್ನು ಒದಗಿಸುವುದು. Xiaomi ಸಿಸ್ಟಂ ಸೇವೆಗಳನ್ನು ಬಳಸಲು, ಸೇವೆಯ ಸರಿಯಾದ ಆವೃತ್ತಿಯನ್ನು ನಿಮಗೆ ಒದಗಿಸಲು ಮತ್ತು ಉತ್ತಮ ಬಳಕೆದಾರ ಅನುಭವಕ್ಕಾಗಿ ಆ ಸ್ಥಳದ ಕುರಿತು ನಿಖರವಾದ ವಿವರಗಳನ್ನು ಒದಗಿಸಲು ಸ್ಥಳ ಮಾಹಿತಿಯನ್ನು ನಾವು ಅಥವಾ ಥರ್ಡ್-ಪಾರ್ಟಿ ಸೇವಾ ಪೂರೈಕೆದಾರರು ಮತ್ತು ವ್ಯಾಪಾರ ಪಾಲುದಾರರು ಬಳಸಬಹುದು (ಹೆಚ್ಚಿನ ಮಾಹಿತಿಗಾಗಿ ಕೆಳಗಿನ "ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಹಂಚುತ್ತೇವೆ, ವರ್ಗಾಯಿಸುತ್ತೇವೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇವೆ" ನೋಡಿ), (ಉದಾ. ಹವಾಮಾನ ವಿವರಗಳು), ಸ್ಥಳ ಪ್ರವೇಶ Android ಪ್ಲಾಟ್‌ಫಾರ್ಮ್ ಭಾಗವಾಗಿ. ನೀವು ಸೆಟ್ಟಿಂಗ್‌ಗಳಲ್ಲಿ ಸ್ಥಳ ಸೇವೆಗಳನ್ನು ಆಫ್ ಮಾಡಬಹುದು ಅಥವಾ ಯಾವುದೇ ಸಮಯದಲ್ಲಿ ಆ್ಯಪ್‌ನ ಸ್ಥಳ ಸೇವೆಗಳ ಬಳಕೆಯನ್ನು ಆಫ್ ಮಾಡಬಹುದು.
• ಡೇಟಾ, ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ವಿಶ್ಲೇಷಣೆಯ ಮೂಲಕ ಬಳಕೆದಾರ ಅನುಭವ ಸುಧಾರಿಸುವಿಕೆ. ಬಳಕೆದಾರ ಅನುಭವ ಪ್ರೋಗ್ರಾಂನಂತಹ ಕೆಲವು ಆಪ್ಟ್-ಇನ್ ಫೀಚರ್‌ಗಳು, ಬಳಕೆದಾರರು ಮೊಬೈಲ್ ಫೋನ್ ಅನ್ನು ಮತ್ತು Xiaomi ಸಿಸ್ಟಂ ಸೇವೆಗಳನ್ನು ಹಾಗೂಅದರ ಇತರ ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಡೇಟಾವನ್ನು ವಿಶ್ಲೇಷಿಸಲು Xiaomi ಗೆ ಅವಕಾಶ ನೀಡುತ್ತವೆ. ಆ ಮೂಲಕ, ಕ್ರ್ಯಾಶ್ ವರದಿಗಳನ್ನು ಕಳುಹಿಸುವಂತಹ ಬಳಕೆದಾರ ಅನುಭವವನ್ನು ಸುಧಾರಿಸುತ್ತವೆ. Xiaomi ಯು ಬಳಕೆದಾರ ಅನುಭವವನ್ನು ಸುಧಾರಿಸಲು ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ವಿಶ್ಲೇಷಣೆಯನ್ನು ಕೂಡ ನಡೆಸುತ್ತದೆ.
• ಭದ್ರತೆ ಫೀಚರ್ ಒದಗಿಸುವಿಕೆ. ಭದ್ರತಾ ಆ್ಯಪ್‌ನಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಸುರಕ್ಷತೆ ಮತ್ತು ಸಿಸ್ಟಂ ಅಪ್‌ಕೀಪ್ ಫೀಚರ್‌ಗಳಿಗಾಗಿ ಬಳಸಬಹುದು, ಉದಾಹರಣೆಗೆ, ಭದ್ರತೆ ಸ್ಕ್ಯಾನ್, ಬ್ಯಾಟರಿ ಸೇವರ್, ಬ್ಲಾಕ್‌ಲಿಸ್ಟ್, ಕ್ಲೀನರ್, ಇತ್ಯಾದಿ. ಈ ಫೀಚರ್‌ಗಳಲ್ಲಿ ಕೆಲವನ್ನು ಥರ್ಡ್-ಪಾರ್ಟಿ ಸೇವಾ ಪೂರೈಕೆದಾರರು ಮತ್ತು/ಅಥವಾ ವ್ಯಾಪಾರ ಪಾಲುದಾರರು ನಿರ್ವಹಿಸುತ್ತಾರೆ (ಹೆಚ್ಚಿನ ಮಾಹಿತಿಗಾಗಿ ಕೆಳಗಿನ "ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಹಂಚುತ್ತೇವೆ, ವರ್ಗಾಯಿಸುತ್ತೇವೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇವೆ" ನೋಡಿ). ಮಾಹಿತಿಯನ್ನು ವೈರಸ್ ಡೆಫಿನೀಶನ್ ಪಟ್ಟಿಗಳಂತಹ ವೈಯಕ್ತಿಕ ಮಾಹಿತಿಯಲ್ಲದ ಭದ್ರತೆ ಸ್ಕ್ಯಾನ್ ಕಾರ್ಯಗಳಿಗೆ ಬಳಸಲಾಗುತ್ತದೆ.
• ಪುಶ್ ಸೇವೆ ಒದಗಿಸುವುದು. ಜಾಹೀರಾತು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಮಾರಾಟಗಳು ಮತ್ತು ಪ್ರಚಾರಗಳ ಕುರಿತು ಮಾಹಿತಿ ಸೇರಿದಂತೆ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಅಥವಾ ಹೊಸ ಉತ್ಪನ್ನ ಪ್ರಕಟಣೆಗಳ ಕುರಿತು ಸಿಸ್ಟಂನಿಂದ ನೋಟಿಫಿಕೇಶನ್‌ಗಳನ್ನು ಕಳುಹಿಸಲು Xiaomi ಪುಶ್ ಸೇವೆಯನ್ನು ಹಾಗೂ Xiaomi ನೋಟಿಫಿಕೇಶನ್ ಸೇವೆ ಒದಗಿಸಲು Xiaomi ಖಾತೆ ಐಡಿ, GAID, FCM ಟೋಕನ್, Android ಐಡಿ ಹಾಗೂ Space ಐಡಿಯನ್ನು (ಎರಡನೇ ಸ್ಥಳ ಫೀಚರ್ ಆನ್ ಆಗಿರುವ Xiaomi ಡಿವೈಸ್‌ಗಳಲ್ಲಿ ಮಾತ್ರ) ಸಹ ಬಳಸಲಾಗುತ್ತದೆ. ಈ ಮೇಲಿನ ಸೇವೆಯನ್ನು ನಿಮಗೆ ಒದಗಿಸಲು, ಸಂಬಂಧಿತ ಆ್ಯಪ್ ಮಾಹಿತಿ (ಆ್ಯಪ್ ಆವೃತ್ತಿ ಐಡಿ, ಆ್ಯಪ್ ಪ್ಯಾಕೇಜ್ ಹೆಸರು), ಹಾಗೂ ಸಂಬಂಧಿತ ಡಿವೈಸ್ ಮಾಹಿತಿ (ಮಾಡೆಲ್, ಬ್ರ್ಯಾಂಡ್) ಅನ್ನೂ ಸಂಗ್ರಹಿಸಲಾಗುತ್ತದೆ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಮತ್ತು/ಅಥವಾ ಆಯ್ದ ಥರ್ಡ್ ಪಾರ್ಟಿಗಳ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಅಥವಾ ಜಾಹೀರಾತು ನೀಡುವ ಪುಶ್ ಸಂದೇಶಗಳನ್ನು (ನಮ್ಮ ಸೇವೆಗಳೊಳಗೇ ಸಂದೇಶಗಳನ್ನು ಕಳುಹಿಸುವುದು, ಇಮೇಲ್ ಅಥವಾ ಇತರೆ ವಿಧಾನಗಳ ಮೂಲಕ) ನಿಮಗೆ ಕಳುಹಿಸುವ ಉದ್ದೇಶಕ್ಕಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಬಳಸಿಕೊಳ್ಳಬಹುದು. ಅದನ್ನು, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ, ನಿಮ್ಮ ಸಮ್ಮತಿ ಪಡೆದುಕೊಂಡೇ ಮಾಡಲಾಗುತ್ತದೆ. ಸೆಟ್ಟಿಂಗ್‌ಗಳ ಅಡಿಯಲ್ಲಿ ನಿಮ್ಮ ಆದ್ಯತೆಗಳನ್ನು ಬದಲಾಯಿಸುವ ಮೂಲಕ ಅಥವಾ Xiaomi ಪುಶ್ ಬಳಸಿ ಥರ್ಡ್-ಪಾರ್ಟಿ ಆ್ಯಪ್/ವೆಬ್‌ಸೈಟ್ ಮೂಲಕ ನಿಮ್ಮ ಆದ್ಯತೆಗಳನ್ನು ನಿರ್ವಹಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ ನಮ್ಮಿಂದ ಮತ್ತು ಥರ್ಡ್ ಪಾರ್ಟಿಗಳಿಂದ ಮಾರ್ಕೆಟಿಂಗ್ ಮಾಹಿತಿ ಸ್ವೀಕರಿಸುವುದನ್ನು ತ್ಯಜಿಸಬಹುದಾಗಿದೆ. ದಯವಿಟ್ಟು ಕೆಳಗಿರುವ “ನಿಮ್ಮ ಹಕ್ಕುಗಳು” ಅನ್ನು ನೋಡಿ.
• ಬಳಕೆದಾರ ಗುರುತು ಪರಿಶೀಲಿಸುವಿಕೆ. ಬಳಕೆದಾರರ ಗುರುತನ್ನು ಪರಿಶೀಲಿಸಲು ಮತ್ತು ಅನಧಿಕೃತ ಲಾಗ್‌ಇನ್‌ಗಳನ್ನು ತಪ್ಪಿಸಲು Xiaomi ಯು ECV ಮೌಲ್ಯವನ್ನು ಬಳಸುತ್ತದೆ.
• ಬಳಕೆದಾರರ ಅಭಿಪ್ರಾಯ ಸಂಗ್ರಹಿಸುವಿಕೆ. ನಮ್ಮ ಸೇವೆಗಳನ್ನು ಸುಧಾರಿಸಲು Xiaomi ಗೆ ಸಹಾಯ ಮಾಡುವಲ್ಲಿ ನೀವು ಆಯ್ಕೆಮಾಡಿದ ಅಭಿಪ್ರಾಯವು ಮೌಲ್ಯಯುತವಾಗಿದೆ. ನೀವು ಒದಗಿಸಲು ಆಯ್ಕೆಮಾಡಿರುವ ಪ್ರತಿಕ್ರಿಯೆಯನ್ನು ಅನುಸರಿಸಲು, ನೀವು ಒದಗಿಸಿದ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು Xiaomi ನಿಮ್ಮೊಂದಿಗೆ ವ್ಯವಹರಿಸಬಹುದಾಗಿದೆ ಮತ್ತು ಸಮಸ್ಯೆಯ ಪರಿಹಾರ ಮತ್ತು ಸೇವೆಯ ಸುಧಾರಣೆಗೆ ಈ ವ್ಯವಹಾರದ ದಾಖಲೆಗಳನ್ನು ಇರಿಸಿಕೊಳ್ಳಬಹುದಾಗಿದೆ.
• ಅಧಿಸೂಚನೆಗಳನ್ನು ಕಳುಹಿಸುವಿಕೆ. ಕಾಲ ಕಾಲಕ್ಕೆ, ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರಮುಖ ಸೂಚನೆಗಳನ್ನು ಕಳುಹಿಸಲು ಬಳಸಬಹುದಾಗಿದೆ. ಉದಾಹರಣೆಗೆ, ಖರೀದಿಗಳು ಮತ್ತು ನಮ್ಮ ನಿಯಮಗಳು, ಷರತ್ತುಗಳು ಮತ್ತು ನೀತಿಗಳಲ್ಲಾದ ಬದಲಾವಣೆಗಳನ್ನು ಕುರಿತ ಸೂಚನೆಗಳು. Xiaomi ಜೊತೆಗಿನ ನಿಮ್ಮ ಸಂವಾದಕ್ಕೆ ಈ ಬಗೆಯ ಮಾಹಿತಿ ತುಂಬಾ ಮುಖ್ಯವಾದ ಕಾರಣ, ಈ ನೋಟಿಸ್‌ಗಳ ಸ್ವೀಕಾರಕ್ಕೆ ಸಮ್ಮತಿಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ.
• ಪ್ರಚಾರ ಕಾರ್ಯಗಳನ್ನು ನಡೆಸುವಿಕೆ. ನೀವು Xiaomi ಯ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸ್ವೀಪ್‌ಸ್ಟೇಕ್, ಸ್ವರ್ಧೆ ಅಥವಾ ಅಂತಹ ಪ್ರಚಾರದಲ್ಲಿ ತೊಡಗಿಸಿಕೊಂಡರೆ, ಈ ಬಹುಮಾನಗಳನ್ನು ನಿಮಗೆ ಕಳುಹಿಸಲು ನೀವು ಒದಗಿಸುವ ವೈಯಕ್ತಿಕ ಮಾಹಿತಿಯನ್ನು ನಾವು ಬಳಸಿಕೊಳ್ಳಬಹುದಾಗಿದೆ.
• ಜಾಹೀರಾತುಗಳನ್ನು ಒಳಗೊಂಡಂತೆ ವೈಯಕ್ತೀಕೃತ ಸೇವೆಗಳು ಹಾಗೂ ಕಂಟೆಂಟ್‌ಗಳನ್ನು ಒದಗಿಸುವುದು. ನಿಮ್ಮ ಗೌಪ್ಯತೆ ನೀತಿಯನ್ನು ರಕ್ಷಿಸಲು, ನಿಮ್ಮ ಹೆಸರು, ಇಮೇಲ್, ಅಥವಾ ಇತರೆ ಮಾಹಿತಿಯ ಬದಲಿಗೆ ಒಂದು ಅನನ್ಯ ಗುರುತಿಸುವಿಕೆಯನ್ನು ನಾವು ಬಳಸುತ್ತೇವೆ. ಅದರ ಮೂಲಕ ನಿಮ್ಮನ್ನು ನೇರವಾಗಿ ಗುರುತಿಸಬಹುದು. ಆ ಮೂಲಕ, ನಿಮಗೆ, ಜಾಹೀರಾತುಗಳನ್ನು ಒಳಗೊಂಡಂತೆ, ವೈಯಕ್ತಿಕಗೊಳಿಸಿದ ಉತ್ಪನ್ನಗಳು, ಸೇವೆಗಳು ಹಾಗೂ ಚಟುವಟಿಕೆಗಳನ್ನು ಒದಗಿಸಲಾಗುತ್ತದೆ.
ನಮ್ಮ ಉತ್ಪನ್ನಗಳು, ಸೇವೆಗಳು, ವಿಷಯ ಮತ್ತು ಜಾಹೀರಾತನ್ನು ಒದಗಿಸಲು ಮತ್ತು ಸುಧಾರಿಸಲು ನಾವು ಈ ಮಾಹಿತಿಯನ್ನು ಇತರೆ ಮಾಹಿತಿಯೊಂದಿಗೆ (ಕಂಪ್ಯೂಟರ್‌ಗಳು, ಮೊಬೈಲ್ ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರೆ ಸಂಪರ್ಕಿತ ಡಿವೈಸ್‌ಗಳಂತಹ ಮಾಹಿತಿ ಒಳಗೊಂಡಂತೆ ವಿವಿಧ ಸೇವೆಗಳಾದ್ಯಂತದ ಮಾಹಿತಿ) ಸಂಯೋಜಿಸಬಹುದಾಗಿದೆ.
ಉದಾಹರಣೆಗೆ, Xiaomi ಖಾತೆ ಅಗತ್ಯವಿರುವ ನೀವು ಬಳಸುವ ಎಲ್ಲಾ ಸೇವೆಗಳಲ್ಲಿ ನಿಮ್ಮ Xiaomi ಖಾತೆ ವಿವರಣೆಗಳನ್ನು ನಾವು ಬಳಸಬಹುದಾಗಿದೆ. ಇದಲ್ಲದೆ, ಸಂಬಂಧಿತ ಕಾನೂನುಗಳು ಮತ್ತು ನಿಬಂಧನೆಗಳನ್ನು(ಅವಶ್ಯಕತೆ ಇದ್ದಾಗ) ಅನುಸರಿಸುವಾಗ ಅಥವಾ ನಿಮ್ಮ ಒಪ್ಪಿಗೆಯೊಂದಿಗೆ ನಿಮಗೆ ಉತ್ತಮ ಅನುಭವವನ್ನು ನೀಡಲು ಮತ್ತು ನಮ್ಮ ಸೇವೆಗಳನ್ನು ಸುಧಾರಿಸಲು, ಸಲಹೆಗಳು, ಕಸ್ಟಮೈಸ್ ಮಾಡಿದ ವಿಷಯ ಮತ್ತು ವೈಯಕ್ತಿಕಗೊಳಿಸಿದ ಫೀಚರ್‌ಗಳನ್ನು ಒದಗಿಸಲು ನಿಮ್ಮಿಂದ ಅಥವಾ ನಿಮಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳು, ಸೇವೆಗಳು ಅಥವಾ ಡಿವೈಸ್‌ಗಳಿಂದ ನಾವು ಮಾಹಿತಿಯನ್ನು ವಿಂಗಡಿಸಬಹುದಾಗಿದೆ.
ವೈಯಕ್ತೀಕೃತ ಜಾಹೀರಾತುಗಳಿಗಾಗಿ, ಇವುಗಳನ್ನು, ಉದಾಹರಣೆಗೆ, ನಿಮ್ಮ ಆ್ಯಪ್‌ಗಳು ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ನಿಮ್ಮ ಚಟುವಟಿಕೆಗಳು, ಬಳಕೆ ಮತ್ತು ಆದ್ಯತೆಗಳ, ಆಧಾರದ ಮೇಲೆ ಒದಗಿಸಲಾಗುತ್ತದೆ. ಈ ಮೇಲಿನ ಮಾಹಿತಿಯನ್ನು ವಿಶ್ಲೇಷಿಸುವ ಹಾಗೂ ಸೆಗ್ಮೆಂಟ್‌ಗಳನ್ನು ರಚಿಸುವ ಮೂಲಕ (ಹಂಚಿತ ನಿರ್ದಿಷ್ಟ ಗುಣಲಕ್ಷಣಗಳ ಗುಂಪುಗಳು) ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒಂದು ಅಥವಾ ಒಂದಕ್ಕಿಂತ ಹೆಚ್ಚು ಸೆಗ್ಮೆಂಟ್‌ಗಳಲ್ಲಿ ಇಡುವ ಮೂಲಕ .ನಾವು ಪ್ರೊಫೈಲ್‌ಗಳನ್ನು ರಚಿಸುತ್ತೇವೆ. ಗುರಿ ಹೊಂದಿರುವ ಜಾಹೀರಾತನ್ನು, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ, ನಿಮ್ಮ ಸಮ್ಮತಿ ಪಡೆದುಕೊಂಡೇ ಮಾಡಲಾಗುತ್ತದೆ. ವೈಯಕ್ತೀಕರಿಸಿದ ಜಾಹೀರಾತುಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯಲು ಮತ್ತು ಯಾವುದೇ ಸಮಯದಲ್ಲಿ ನೇರ ಮಾರುಕಟ್ಟೆ ಉದ್ದೇಶಗಳಿಗಾಗಿ ನಡೆಸುವ ಪ್ರೊಫೈಲಿಂಗ್ ಅನ್ನು ಆಕ್ಷೇಪಿಸಲು ನಿಮಗೆ ಹಕ್ಕಿದೆ.
ಮೇಲಿನ ಸಂಯೋಜನೆಯ ಕಾರಣಗಳು ಮತ್ತು ಅನ್ವಯವಾಗುವ ಕಾನೂನುಗಳ ಅವಶ್ಯಕತೆಗಳ ಪ್ರಕಾರ, ನಾವು ಅಂತಹ ಸಂಯೋಜನೆಗಾಗಿ ನಿಮಗೆ ನಿರ್ದಿಷ್ಟ ನಿಯಂತ್ರಣ ಕಾರ್ಯವಿಧಾನಗಳನ್ನು ಒದಗಿಸುತ್ತೇವೆ. ನಮ್ಮಿಂದ ನೇರ ಜಾಹೀರಾತು ಮತ್ತು ಸ್ವಯಂಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆಗಳನ್ನು ತಿರಸ್ಕರಿಸುವ ಹಕ್ಕು ನಿಮಗಿದೆ. ಈ ಹಕ್ಕುಗಳನ್ನು ಚಲಾಯಿಸಲು, ನೀವು ಈ ಫೀಚರ್‌ಗಳನ್ನು ಯಾವುದೇ ಕ್ಷಣದಲ್ಲಿ ಸೆಟ್ಟಿಂಗ್‌ಗಳು > ಪಾಸ್‌ವರ್ಡ್‌ಗಳು & ಭದ್ರತೆ > ಗೌಪ್ಯತೆ > ಜಾಹೀರಾತು ಸೇವೆಗಳು ಅಥವಾ ಸೆಟ್ಟಿಂಗ್‌ಗಳು > ಪಾಸ್‌ವರ್ಡ್‌ಗಳು & ಭದ್ರತೆ > ಸಿಸ್ಟಂ ಭದ್ರತೆ > ಜಾಹೀರಾತು ಸೇವೆಗಳು ನಲ್ಲಿ ಆನ್ ಅಥವಾ ಆಫ್ ಮಾಡಬಹುದು, ಅಥವಾ ನೀವು ನಮ್ಮನ್ನು https://privacy.mi.com/support ದಲ್ಲಿ ಭೇಟಿಯಾಗಬಹುದು, ಅಥವಾ ಪ್ರತಿಯೊಂದು ಉತ್ಪನ್ನಕ್ಕೆ ನೀಡಲಾದ ಪ್ರತ್ಯೇಕ ಗೌಪ್ಯತೆ ನೀತಿಯಲ್ಲಿ ವಿವರಿಸಿದ ನಿಯಂತ್ರಣ ವ್ಯವಸ್ಥೆಯನ್ನು ರೆಫರ್ ಮಾಡಬಹುದು. ದಯವಿಟ್ಟು ಕೆಳಗಿರುವ “ನಿಮ್ಮ ಹಕ್ಕುಗಳನ್ನು” ನೋಡಿ.
2. ಕುಕೀಗಳು ಮತ್ತು ಇತರೆ ತಂತ್ರಜ್ಞಾನಗಳು
Xiaomi ಮತ್ತು ನಮ್ಮ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು, ವ್ಯಾಪಾರ ಪಾಲುದಾರರು ಬಳಸಿರುವ ಕುಕೀಗಳು, ವೆಬ್ ಬೇಕಾನ್‌ಗಳು ಮತ್ತು ಪಿಕ್ಸೆಲ್ ಟ್ಯಾಗ್‌ಗಳಂತಹ ತಂತ್ರಜ್ಞಾನಗಳು (ಹೆಚ್ಚಿನ ಮಾಹಿತಿಗಾಗಿ ಕೆಳಗಿನ “ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಹಂಚುತ್ತೇವೆ, ವರ್ಗಾಯಿಸುತ್ತೇವೆ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇವೆ” ನೋಡಿ). ಟ್ರೆಂಡ್‌ಗಳನ್ನು ವಿಶ್ಲೇಷಿಸಲು, ಸೈಟ್‌ನ ಆಡಳಿತಕ್ಕೆ, ವೆಬ್‌ಸೈಟ್‌ನಾದ್ಯಂತ ಬಳಕೆದಾರರ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಒಟ್ಟಾರೆಯಾಗಿ ನಮ್ಮ ಬಳಕೆದಾರರ ಮೂಲದ ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸಲು ಈ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಈ ಕಂಪನಿಗಳು ವ್ಯಕ್ತಿಗತವಾಗಿ ಅಥವಾ ಒಟ್ಟಾರೆಯಾಗಿ ಈ ತಂತ್ರಜ್ಞಾನಗಳನ್ನು ಬಳಕೆ ಮಾಡುವುದರ ಆಧಾರದ ಮೇಲೆ ನಾವು ವರದಿಗಳನ್ನು ಸ್ವೀಕರಿಸುತ್ತೇವೆ. ಈ ತಂತ್ರಜ್ಞಾನಗಳು ಬಳಕೆದಾರರ ನಡವಳಿಕೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ, ನಮ್ಮ ವೆಬ್‌ಸೈಟ್‌ಗಳ ಯಾವ ಭಾಗಗಳಿಗೆ ಜನರು ಭೇಟಿ ನೀಡಿದ್ದಾರೆ ಎಂಬುದನ್ನು ನಮಗೆ ತಿಳಿಸಿ, ಜೊತೆಗೆ ಜಾಹೀರಾತುಗಳು ಮತ್ತು ವೆಬ್ ಹುಡುಕಾಟಗಳ ಪರಿಣಾಮಕಾರಿತ್ವವನ್ನು ಸುಗಮಗೊಳಿಸಿ ಮತ್ತು ಅಳೆಯಿರಿ.
•ಲಾಗ್ ಫೈಲ್‌ಗಳು: ಬಹುತೇಕ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದಂತೆ, ಕೆಲವೊಂದು ಮಾಹಿತಿಯನ್ನು ನಾವು ಕಲೆಹಾಕುತ್ತೇವೆ ಮತ್ತು ಅದನ್ನು ಲಾಗ್ ಫೈಲ್‌ಗಳಲ್ಲಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು IP ವಿಳಾಸಗಳು, ಬ್ರೌಸರ್ ಪ್ರಕಾರ, ಇಂಟರ್‌ನೆಟ್ ಸೇವಾ ಪೂರೈಕೆದಾರರು (ISP), ಉಲ್ಲೇಖಿತ/ನಿರ್ಗಮಿತ ಪುಟಗಳು, ಆಪರೇಟಿಂಗ್ ಸಿಸ್ಟಂ, ದಿನಾಂಕ/ಸಮಯ ಸ್ಟ್ಯಾಂಪ್ ಮತ್ತು/ಅಥವಾ ಕ್ಲಿಕ್‌ಸ್ಟ್ರೀಮ್ ಡೇಟಾವನ್ನು ಒಳಗೊಂಡಿರಬಹುದು. ಈ ಸ್ವಯಂಚಾಲಿತವಾಗಿ ಸಂಗ್ರಹಿಸಲಾದ ಡೇಟಾವನ್ನು ನಿಮ್ಮ ಕುರಿತು ನಾವು ಸಂಗ್ರಹಿಸಿದ ಇತರೆ ಮಾಹಿತಿಗೆ ಲಿಂಕ್ ಮಾಡುವುದಿಲ್ಲ.
• ಸ್ಥಳೀಯ ಸಂಗ್ರಹ – HTML5/ಫ್ಲ್ಯಾಶ್: ವಿಷಯಗಳು ಮತ್ತು ಆದ್ಯತೆಗಳನ್ನು ಸಂಗ್ರಹಿಸಲು ನಾವು HTML5 ಅಥವಾ ಫ್ಲ್ಯಾಶ್‌ನಂಥ ಸ್ಥಳೀಯ ಸಂಗ್ರಹಣೆ ಗುರಿಗಳನ್ನು (LSOs) ಬಳಸುತ್ತೇವೆ. ನಮ್ಮ ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಫೀಚರ್‌ಗಳನ್ನು ಒದಗಿಸುವ ಮತ್ತು ನಿಮ್ಮ ವೆಬ್ ಬ್ರೌಸಿಂಗ್ ಚಟುವಟಿಕೆಯ ಆಧಾರದ ಮೇಲೆ ನಮ್ಮ ಸೈಟ್ ಮೇಲೆ ಜಾಹೀರಾತು ಡಿಸ್‌ಪ್ಲೇ ಮಾಡುವ, ನಮ್ಮ ಪಾಲುದಾರರಾದ, ಕೆಲವು ಥರ್ಡ್ ಪಾರ್ಟಿಗಳು ಸಹ ಮಾಹಿತಿಯನ್ನು ಸಂಗ್ರಹಿಸಲು HTML5 ಅಥವಾ ಫ್ಲ್ಯಾಶ್ ಕುಕೀಗಳನ್ನೇ ಬಳಸುತ್ತವೆ. HTML5 LSO ಗಳನ್ನು ತೆಗೆದುಹಾಕಲು ಬಹುತೇಕ ಬ್ರೌಸರ್‌ಗಳು ತಮ್ಮದೇ ಆದ ನಿರ್ವಹಣಾ ಪರಿಕರವನ್ನು ಒದಗಿಸುತ್ತವೆ. ನಿಮ್ಮ ಫ್ಲ್ಯಾಶ್ ಕುಕಿಗಳನ್ನು ನಿರ್ವಹಿಸಲು ನೀವು ಇಲ್ಲಿ ಕ್ಲಿಕ್ ಮಾಡಬಹುದು.
• ಜಾಹೀರಾತು ಕುಕೀಗಳು: ನಮ್ಮ ವೆಬ್‌ಸೈಟ್‌ನಲ್ಲಿ ಜಾಹೀರಾತನ್ನು ಪ್ರದರ್ಶಿಸಲು ಅಥವಾ ಇತರೆ ಸೈಟ್‌ಗಳಲ್ಲಿ ನಮ್ಮ ಜಾಹೀರಾತನ್ನು ನಿರ್ವಹಿಸಲು ನಾವು ನಮ್ಮ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು ಮತ್ತು ವ್ಯಾಪಾರ ಪಾಲುದಾರರೊಂದಿಗೆ ಪಾಲುದಾರರಾಗಿದ್ದೇವೆ (ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ "ನಾವು ನಿಮ್ಮ ವೈಯಕ್ತಿಕವಾಗಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತೇವೆ, ವರ್ಗಾಯಿಸುತ್ತೇವೆ ಮತ್ತು ಸಾರ್ವಜನಿಕವಾಗಿ ಪ್ರಕಟಿಸುತ್ತೇವೆ" ಅನ್ನು ನೋಡಿ). ನಮ್ಮ ಥರ್ಡ್ ಪಾರ್ಟಿ ಸೇವೆ ಪೂರೈಕೆದಾರರು ಹಾಗೂ ವ್ಯವಹಾರ ಪಾಲುದಾರರು ನಿಮ್ಮ ಆನ್‌ಲೈನ್ ಚಟುವಟಿಕೆಗಳು, ನಿಮ್ಮ ಆಸಕ್ತಿಗಳು ಕುರಿತ ಮಾಹಿತಿಯನ್ನು ಸಂಗ್ರಹಿಸಲು ಜಾಹೀರಾತು ಕುಕಿಗಳನ್ನು ಬಳಸಿಕೊಳ್ಳಬಹುದು. ಆ ಬಳಿಕ, ನಿಮ್ಮ ಪ್ರೊಫೈಲ್ ಹಾಗೂ ಆಸಕ್ತಿಗಳಿಗೆ ಹೊಂದುವ ಜಾಹೀರಾತುಗಳನ್ನು ನಿಮಗೆ ಒದಗಿಸಲು ಅವರಿಗೆ ಸಾಧ್ಯವಾಗುತ್ತದೆ. ನಿಮಗೆ ಈ ಜಾಹೀರಾತು ಸೇವೆ ಒದಗಿಸುವ ಮುಂಚಿತವಾಗಿ ನಿಮ್ಮಿಂದ ಸ್ಪಷ್ಟ ಸಮ್ಮತಿ ಪಡೆದುಕೊಳ್ಳುತ್ತೇವೆ. ಆಸಕ್ತಿ-ಆಧಾರಿತ ಜಾಹೀರಾತುಗಳಿಗೆ ನಿಮ್ಮ ಈ ಮಾಹಿತಿಯನ್ನು ಬಳಸಿಕೊಳ್ಳುವುದು ನಿಮಗೆ ಇಷ್ಟವಿಲ್ಲ ಎಂದಾದರೆ, ಕುಕೀಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನೀವು ಅದರಿಂದ ಹೊರಬರಬಹುದು.
• ಮೊಬೈಲ್ ವಿಶ್ಲೇಷಣೆ: ಭೇಟಿ ನೀಡಿರುವವರು ನಮ್ಮ ವೆಬ್‌ಸೈಟ್ ಅನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ನೋಡುವ ಸಲುವಾಗಿ ಅದರ ಮಾಹಿತಿಯನ್ನು ಸಂಗ್ರಹಿಸಲು ನಾವು ನಮ್ಮ ಕೆಲವು ಮೊಬೈಲ್ ಆ್ಯಪ್‌ಗಳಲ್ಲಿ ವಿಶ್ಲೇಷಣೆ ಕುಕಿಗಳನ್ನು ಬಳಸುತ್ತೇವೆ. ಈ ಕುಕೀಗಳು ಆ್ಯಪ್ ಅನ್ನು ನೀವು ಎಷ್ಟು ಬಾರಿ ಬಳಸುತ್ತೀರಿ ಆ್ಯಪ್‌ನಲ್ಲಿ ಕಂಡುಬಂದ ಈವೆಂಟ್‌ಗಳು, ಒಟ್ಟಾರೆ ಬಳಕೆ, ಕಾರ್ಯದ ಡೇಟಾ ಮತ್ತು ಆ್ಯಪ್‌ನ ಯಾವ ಭಾಗದಲ್ಲಿ ಕ್ರ್ಯಾಶ್‌ಗಳಾಗುತ್ತವೆ ಎನ್ನುವಂತಹ ಕೆಲವು ಮಾಹಿತಿಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತವೆ. ವಿಶ್ಲೇಷಣೆ ಸಾಫ್ಟ್‌ವೇರ್‌ನಲ್ಲಿ ನಾವು ಸಂಗ್ರಹಿಸಿದ ಮಾಹಿತಿಯನ್ನು ಆ್ಯಪ್‌ನಲ್ಲಿ ನೀವು ಒದಗಿಸಿದ ಯಾವುದೇ ವೈಯಕ್ತಿಕ ಮಾಹಿತಿಗೆ ನಾವು ಲಿಂಕ್ ಮಾಡುವುದಿಲ್ಲ.
3. ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತೇವೆ, ವರ್ಗಾಯಿಸುತ್ತೇವೆ ಮತ್ತು ಸಾರ್ವಜನಿಕವಾಗಿ ಪ್ರಕಟಿಸುತ್ತೇವೆ
3.1 ಹಂಚಿಕೆ
ನಾವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಥರ್ಡ್ ಪಾರ್ಟಿಗಳಿಗೆ ಮಾರಾಟ ಮಾಡುವುದಿಲ್ಲ.
ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ಉತ್ಪನ್ನಗಳು ಅಥವಾ ಸೇವೆಗಳನ್ನು ನೀಡುವುದು ಸೇರಿದಂತೆ ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸಲು ಅಥವಾ ಸುಧಾರಿಸಲು ನಾವು ಕೆಲವೊಮ್ಮೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಥರ್ಡ್ ಪಾರ್ಟಿಗಳೊಂದಿಗೆ (ಕೆಳಗೆ ವಿವರಿಸಿದಂತೆ) ಹಂಚಿಕೊಳ್ಳಬಹುದಾಗಿದೆ. ಡೇಟಾ ಹಂಚಿಕೆ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
3.1.1 ನೀವು ಸಕ್ರಿಯವಾಗಿ ಆಯ್ಕೆಮಾಡಿದ ಅಥವಾ ವಿನಂತಿಸಿದ ಹಂಚಿಕೆ
ನಿಮ್ಮ ಸಮ್ಮತಿಯೊಂದಿಗೆ ಅಥವಾ ನಿಮ್ಮ ವಿನಂತಿಯೊಂದಿಗೆ, ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಮ್ಮ ಸಮ್ಮತಿ/ವಿನಂತಿಯ ವ್ಯಾಪ್ತಿಯೊಳಗೆ, ನಿಮಗಾಗಿ ನಿಗದಿಯಾದ ನಿರ್ದಿಷ್ಟ ಥರ್ಡ್ ಪಾರ್ಟಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಉದಾಹರಣೆಗೆ, ನೀವು ಥರ್ಡ್ ಪಾರ್ಟಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಸೈನ್ ಇನ್ ಆಗಲು Xiaomi ಖಾತೆ ಬಳಸಿದಾಗ.
3.1.2 ನಿಮ್ಮ ಗುಂಪಿನೊಂದಿಗೆ ಮಾಹಿತಿಯ ಹಂಚಿಕೆ
ವ್ಯವಹಾರ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಲು ಮತ್ತು ನಮ್ಮ ಉತ್ಪನ್ನಗಳು ಅಥವಾ ಸೇವೆಗಳ ಎಲ್ಲಾ ಫೀಚರ್‌ಗಳನ್ನು ನಿಮಗೆ ಒದಗಿಸಲು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಕಾಲಕಾಲಕ್ಕೆ ಇತರೆ Xiaomi ಅಂಗಸಂಸ್ಥೆಗಳಿಗೆ ಹಂಚಿಕೊಳ್ಳಬಹುದು.
3.1.3 ನಮ್ಮ ಸಮೂಹದ ಇಕೋಸಿಸ್ಟಂ ಕಂಪನಿಗಳೊಂದಿಗೆ ಹಂಚಿಕೆ
Xiaomi ಯು ಕಂಪನಿಗಳ ಸಮೂಹದೊಂದಿಗೆ ಕಾರ್ಯನಿರ್ವಹಿಸುತ್ತದೆ, ಇವೆಲ್ಲವೂ ಒಟ್ಟಾರೆಯಾಗಿ Xiaomi ಇಕೋಸಿಸ್ಟಂ ಅನ್ನು ರೂಪಿಸುತ್ತವೆ. Xiaomi ಇಕೋಸಿಸ್ಟಂ ಕಂಪನಿಗಳು ಸ್ವತಂತ್ರ ಸಂಸ್ಥೆಗಳಾಗಿದ್ದು Xiaomi ಯು ಅವುಗಳಲ್ಲಿ ಹೂಡಿಕೆ ಮಾಡುತ್ತದೆ ಮತ್ತು ಅವುಗಳನ್ನು ಮುನ್ನಡೆಸುತ್ತಿರುತ್ತದೆ, ಅವುಗಳು ತಮ್ಮದೇ ಆದ ಕ್ಷೇತ್ರಗಳಲ್ಲಿ ನಿಪುಣವಾಗಿವೆ. Xiaomi ಇಕೋಸಿಸ್ಟಂ ಕಂಪನಿಗಳಿಂದ ಅತ್ಯಾಕರ್ಷಕ ಉತ್ಪನ್ನಗಳು ಮತ್ತು ಸೇವೆಗಳನ್ನು (ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎರಡೂ) ನಿಮಗೆ ಒದಗಿಸಲು ಮತ್ತು ಸುಧಾರಿಸಲು Xiaomi ನಿಮ್ಮ ವೈಯಕ್ತಿಕ ಮಾಹಿತಿಯನ್ನು Xiaomi ಇಕೋಸಿಸ್ಟಮ್ ಕಂಪನಿಗಳಿಗೆ ಬಹಿರಂಗಪಡಿಸಬಹುದಾಗಿದೆ. ಇದರಲ್ಲಿ ಕೆಲವೊಂದು ಉತ್ಪನ್ನಗಳು ಅಥವಾ ಸೇವೆಗಳು ಇನ್ನೂ Xiaomi ಬ್ರ್ಯಾಂಡ್ ಅಡಿಯಲ್ಲಿರುತ್ತವೆ, ಮತ್ತು ಕೆಲವೊಂದು ತಮ್ಮದೇ ಆದ ಬ್ರಾಂಡ್‌ಗಳನ್ನು ಬಳಸುತ್ತವೆ. ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸಲು, ಉತ್ತಮ ಕಾರ್ಯಗಳು ಮತ್ತು ಬಳಕೆದಾರರ ಅನುಭವವನ್ನು ತರಲು Xiaomi ಬ್ರಾಂಡ್‌ನ ಅಡಿಯಲ್ಲಿನ ಉತ್ಪನ್ನಗಳು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಇಕೋಸಿಸ್ಟಮ್ ಕಂಪನಿಗಳು ಕಾಲ ಕಾಲಕ್ಕೆ Xiaomi ಜೊತೆಗೆ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ನಿಮ್ಮ ವೈಯಕ್ತಿಕ ಮಾಹಿತಿಯ ಎನ್‌ಕ್ರಿಪ್ಟ್ ಮಾಡುವಿಕೆಯನ್ನು ಒಳಗೊಂಡಂತೆ ಆದರೆ ಅದಕ್ಕೇ ಸೀಮಿತವಾಗದಂತೆ ನಿಮ್ಮ ವೈಯಕ್ತಿಕ ಮಾಹಿತಿ ಸಂಸ್ಕರಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು Xiaomi ಸೂಕ್ತ ನಿರ್ವಹಣೆ ಮತ್ತು ತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
3.1.4 ಥರ್ಡ್‌ಪಾರ್ಟಿ ಸೇವೆ ಒದಗಿಸುವವರು ಮತ್ತು ವ್ಯವಹಾರ ಪಾಲುದಾರರೊಂದಿಗೆ ಹಂಚಿಕೊಳ್ಳಿ
ಈ ಗೌಪ್ಯತೆ ನೀತಿಯಲ್ಲಿ ವಿವರಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ನಿಮಗೆ ಒದಗಿಸುವ ಸಲುವಾಗಿ ನಮಗೆ ಸಹಾಯ ಮಾಡಲು, ಅಗತ್ಯವಿದ್ದಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮ್ಮ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು ಮತ್ತು ವ್ಯಾಪಾರ ಪಾಲುದಾರರೊಂದಿಗೆ ನಾವು ಹಂಚಿಕೊಳ್ಳಬಹುದು.
ಇದು ನಮ್ಮ ಡೆಲಿವರಿ ಸೇವೆ ಒದಗಿಸುವವರು, ಡೇಟಾ ಕೇಂದ್ರಗಳು, ಡೇಟಾ ಸಂಗ್ರಹಣೆ ಸೌಲಭ್ಯಗಳು, ಗ್ರಾಹಕ ಸೇವೆ ಪೂರೈಕೆದಾರರು, ಜಾಹೀರಾತುಗಳು ಹಾಗೂ ಮಾರ್ಕೇಟಿಂಗ್ ಸೇವೆ ಒದಗಿಸುವವರು ಹಾಗೂ ಇತರೆ ವ್ಯವಹಾರ ಪಾಲುದಾರರನ್ನು ಒಳಗೊಳ್ಳುತ್ತದೆ. ಈ ಥರ್ಡ್ ಪಾರ್ಟಿಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು Xiaomi ಯ ಪರವಾಗಿ ಅಥವಾ ಈ ಗೌಪ್ಯತೆ ನೀತಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ಉದ್ದೇಶಗಳಿಗಾಗಿ ಪ್ರಕ್ರಿಯೆಗೊಳಿಸಬಹುದು. ನಿಮಗೆ ಸೇವೆಗಳನ್ನು ಒದಗಿಸಲು ಅಗತ್ಯವಾದ ವೈಯಕ್ತಿಕ ಮಾಹಿತಿಯ ಹಂಚಿಕೆ ಕೇವಲ ನ್ಯಾಯಸಮ್ಮತ, ಕಾನೂನು, ಅಗತ್ಯ, ನಿರ್ದಿಷ್ಟ ಮತ್ತು ಸ್ಪಷ್ಟ ಉದ್ದೇಶಗಳಿಗಾಗಿ ಮಾತ್ರ ಎಂಬುದಕ್ಕೆ ನಾವು ಬದ್ಧರಾಗಿದ್ದೇವೆ. Xiaomi ಸೂಕ್ತ ಪರಿಶ್ರಮ ಹಾಕುತ್ತದೆ ಮತ್ತು ಥರ್ಡ್-ಪಾರ್ಟಿ ಸೇವೆ ಒದಗಿಸುವವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವರು ನಿಮ್ಮ ವ್ಯಾಪ್ತಿಯಲ್ಲಿರುವ ಗೌಪ್ಯತೆ ಕಾನೂನುಗಳಿಗೆ ಬದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತದೆ. ಥರ್ಡ್-ಪಾರ್ಟಿ ಸೇವೆ ಪೂರೈಕೆದಾರರು ಕೆಲವೊಮ್ಮೆ ತಮ್ಮದೇ ಆದ ಉಪ-ಪ್ರೊಸೆಸರ್‌ಗಳನ್ನು ಹೊಂದಿರುವ ಸಂದರ್ಭಗಳೂ ಇರಬಹುದು.
ಕಾರ್ಯಕ್ಷಮತೆ ಮಾಪನ, ವಿಶ್ಲೇಷಣೆ ಮತ್ತು ಇತರ ವ್ಯವಹಾರ ಸೇವೆಗಳನ್ನು ಒದಗಿಸಲು, ನಾವು ಮಾಹಿತಿಯನ್ನು ಒಟ್ಟು ರೂಪದಲ್ಲಿ (ನಮ್ಮ ವೆಬ್‌ಸೈಟ್‌ಗಳಲ್ಲಿನ ಜಾಹೀರಾತುದಾರರಂತಹ) ಥರ್ಡ್ ಪಾರ್ಟಿಯೊಂದಿಗೆ (ವೈಯಕ್ತಿಕವಲ್ಲದ ಮಾಹಿತಿ) ಸಹ ಹಂಚಿಕೊಳ್ಳಬಹುದು. ಜಾಹೀರಾತುದಾರರು ಮತ್ತು ಇತರ ವ್ಯಾಪಾರ ಪಾಲುದಾರರು ತಮ್ಮ ಜಾಹೀರಾತು ಮತ್ತು ಸೇವೆಗಳ ಪರಿಣಾಮ ಮತ್ತು ವ್ಯಾಪ್ತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಅವರ ಸೇವೆಗಳನ್ನು ಯಾವೆಲ್ಲಾ ಬಗೆಯ ಜನ ಬಳಸುತ್ತಾರೆ ಎಂಬುದನ್ನು ಅರಿತುಕೊಳ್ಳಲು ಈ ಮಾಹಿತಿಯನ್ನು ಬಳಸಿಕೊಳ್ಳುತ್ತೇವೆ. ಮಾತ್ರವಲ್ಲ, ಜನರು ತಮ್ಮ ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸೇವೆಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೂಡ ನಾವು ಅವರಿಗೆ ಸಹಾಯ ಮಾಡುತ್ತೇವೆ. ನಮ್ಮ ಸೇವೆಗಳ ಸಾಮಾನ್ಯ ಬಳಕೆಯ ಪ್ರವೃತ್ತಿಗಳನ್ನು ನಾವು ಅವರೊಂದಿಗೆ ಹಂಚಿಕೊಳ್ಳಬಹುದು, ಉದಾಹರಣೆಗೆ ಕೆಲವು ಉತ್ಪನ್ನಗಳನ್ನು ಖರೀದಿಸುವ ಅಥವಾ ಕೆಲವು ವಹಿವಾಟಿನಲ್ಲಿ ತೊಡಗಿರುವ ಜನರ ನಿರ್ದಿಷ್ಟ ಗುಂಪಿನಲ್ಲಿರುವ ಗ್ರಾಹಕರ ಸಂಖ್ಯೆ.
3.1.5 ಇತರರು
ಕಾನೂನು ಅಗತ್ಯತೆಗಳಿಗೆ ಅನುಗುಣವಾಗಿ, ಕಾನೂನು ಕಾರ್ಯವಿಧಾನಗಳು, ಮೊಕದ್ದಮೆ ಮತ್ತು/ಅಥವಾ ಸಾರ್ವಜನಿಕ ಏಜೆನ್ಸಿಗಳು ಮತ್ತು ಸರಕಾರಿ ಏಜನ್ಸಿಗಳ ವಿನಂತಿಗಳಿಗೆ ಅನುಗುಣವಾಗಿ Xiaomi ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬೇಕಾಗಬಹುದು. ಬಹಿರಂಗಪಡಿಸುವಿಕೆಯು ರಾಷ್ಟ್ರೀಯ ಭದ್ರತೆ, ಕಾನೂನು ಜಾರಿ ಅಥವಾ ಸಾರ್ವಜನಿಕ ಪ್ರಾಮುಖ್ಯತೆಯ ಇತರ ವಿಷಯಗಳಿಗೆ ಅಗತ್ಯವಿದ್ದರೆ ಅಥವಾ ಸೂಕ್ತವಾಗಿದ್ದರೆ, ನಿಮ್ಮ ಕುರಿತಾದ ಮಾಹಿತಿಯನ್ನು ನಾವು ಸಹ ಬಹಿರಂಗಪಡಿಸಬಹುದು.
ನಮ್ಮ ನಿಯಮಗಳನ್ನು ಜಾರಿಗೊಳಿಸಲು ಅಥವಾ ನಮ್ಮ ವ್ಯವಹಾರ, ಹಕ್ಕುಗಳು, ಸ್ವತ್ತುಗಳು ಅಥವಾ ಉತ್ಪನ್ನಗಳನ್ನು ರಕ್ಷಿಸಲು ಅಥವಾ ಬಳಕೆದಾರರನ್ನು ರಕ್ಷಿಸಲು ಅಥವಾ ಈ ಕೆಳಗಿನ ಉದ್ದೇಶಗಳಿಗಾಗಿ ಬಹಿರಂಗಪಡಿಸುವಿಕೆಯು ಸಮಂಜಸವಾಗಿ ಅಗತ್ಯವಿದ್ದರೆ (ವಂಚನೆ ಪತ್ತೆ, ತಡೆಗಟ್ಟುವಿಕೆ ಅಥವಾ ಪರಿಹರಿಸುವುದು, ಉತ್ಪನ್ನದ ಅನಧಿಕೃತ ಬಳಕೆ, ನಮ್ಮ ನಿಯಮಗಳು ಅಥವಾ ನೀತಿಗಳು ಅಥವಾ ಇತರ ಹಾನಿಕಾರಕ ಅಥವಾ ಕಾನೂನುಬಾಹಿರ ಚಟುವಟಿಕೆಗಳ ಉಲ್ಲಂಘನೆ), ನಾವು ನಿಮ್ಮ ಕುರಿತಾದ ಮಾಹಿತಿಯನ್ನು ಸಹ ಬಹಿರಂಗಪಡಿಸಬಹುದು. Xiaomi ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು, ಬಳಸಿಕೊಳ್ಳಬಹುದು ಅಥವಾ ಬಹಿರಂಗಪಡಿಸಬಹುದು ಮತ್ತು ಅದನ್ನು ಅನ್ವಯವಾಗುವ ಡೇಟಾ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಮಾತ್ರ ಅನುಮತಿಸಲಾಗಿದೆ. ಇದು ಸಾರ್ವಜನಿಕ ಅಥವಾ ಸರಕಾರಿ ಏಜೆನ್ಸಿಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುವುದನ್ನು ಸೇರಿದಂತೆ; ವಂಚನೆ, ಉಲ್ಲಂಘನೆಗಳು ಮತ್ತು ಇತರ ಹಾನಿಕಾರಕ ನಡವಳಿಕೆಗಳನ್ನು ತಡೆಯಲು ನಿಮ್ಮ ಖಾತೆಯ ವಿಶ್ವಾಸಾರ್ಹತೆಯ ಕುರಿತು ಥರ್ಡ್ ಪಾರ್ಟಿ ಪಾಲುದಾರರೊಂದಿಗೆ ಸಂವಹನ ನಡೆಸುವುದು.
ಹೆಚ್ಚುವರಿಯಾಗಿ, ನಾವು ಇವರೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು:
• ನಮ್ಮ ಅಕೌಂಟೆಂಟ್, ಲೆಕ್ಕಪರಿಶೋಧಕರು, ವಕೀಲರು ಅಥವಾ ಇದೇ ರೀತಿಯ ಸಲಹೆಗಾರರು ನಮಗೆ ವೃತ್ತಿಪರ ಸಲಹೆಯನ್ನು ನೀಡುವಂತೆ ಕೇಳಿದಾಗ;
• Xiaomi ಸಮೂಹದಲ್ಲಿನ ಒಂದು ಘಟಕಕ್ಕೆ ಸಂಬಂಧಿಸಿದ ನಿಜವಾದ ಅಥವಾ ಸಂಭಾವ್ಯ ಮಾರಾಟ ಅಥವಾ ಇತರ ಸಾಂಸ್ಥಿಕ ವಹಿವಾಟಿನ ಸಂದರ್ಭದಲ್ಲಿ ಹೂಡಿಕೆದಾರರು ಮತ್ತು ಇತರ ಸಂಬಂಧಿತ ಥರ್ಡ್ ಪಾರ್ಟಿಗಳು; ಮತ್ತು
• ಈ ಗೌಪ್ಯತೆ ನೀತಿಯಲ್ಲಿ ವಿವರಿಸಲಾದ ಇತರೆ ಥರ್ಡ್ ಪಾರ್ಟಿಗಳು ಅಥವಾ ನೀವು ಸೂಚಿಸಿರುವಂಥವರು, ನಿರ್ದಿಷ್ಟ ಬಹಿರಂಗಪಡಿಸುವಿಕೆಗೆ ನಿಮ್ಮಿಂದ ಪ್ರಮಾಣೀಕೃತಗೊಂಡವರು ಒಳಗೊಂಡಂತೆ.
3.2 ವರ್ಗಾವಣೆ
ಕೆಳಗಿನ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ವಿಷಯಕ್ಕೆ Xiaomi ನಿಮ್ಮ ಮಾಹಿತಿಯನ್ನು ವರ್ಗಾಯಿಸುವುದಿಲ್ಲ:
• ನಿಮ್ಮ ಸ್ಪಷ್ಟ ಒಪ್ಪಿಗೆಯನ್ನು ನಾವು ಪಡೆದುಕೊಂಡಾಗ;
• Xiaomi ಅದರ, ನಿಮ್ಮ ವೈಯಕ್ತಿಕ ಮಾಹಿತಿಯ ಮೇಲೆ ಪರಿಣಾಮ ಬೀರುವ, ಸ್ವತ್ತಿನ ಎಲ್ಲಾ ಅಥವಾ ಭಾಗದ ವಿಲೀನ, ಸ್ವಾಧೀನ ಅಥವಾ ಮಾರಾಟದಲ್ಲಿ ಭಾಗಿಯಾಗಿದ್ದರೆ, ನಮ್ಮ ವೆಬ್‌ಸೈಟ್ ಅಥವಾ ಇತರೆ ಸೂಕ್ತ ವಿಧಾನಗಳ ಪ್ರಮುಖ ಪ್ರಕಟಣೆಯನ್ನು ಪೋಸ್ಟ್ ಮಾಡುವ ಮೂಲಕ ನಾವು ಇ-ಮೇಲ್ ಮತ್ತು/ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯ ಮಾಲೀಕತ್ವ, ಬಳಕೆ ಮತ್ತು ಯಾವುದೇ ಆಯ್ಕೆಯ ಯಾವುದೇ ಬದಲಾವಣೆಗಳನ್ನು ನಿಮಗೆ ತಿಳಿಸುತ್ತೇವೆ.
• ಗೌಪ್ಯತೆ ನೀತಿಯಲ್ಲಿ ವಿವರಿಸಿರುವ ಸಂದರ್ಭಗಳಲ್ಲಿ ಅಥವಾ ನೀವು ಸೂಚಿಸಿರುವಂಥವು.
3.3 ಸಾರ್ವಜನಿಕ ಬಹಿರಂಗಪಡಿಸುವಿಕೆ
Xiaomi ಯು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಈ ಕೆಳಗಿನ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಬಹುದು:
• ಪ್ರಚಾರಗಳು, ಸ್ಪರ್ಧೆ ಅಥವಾ ಸ್ವೀಪ್‌ಸ್ಟೇಕ್‌ನಲ್ಲಿ ವಿಜೇತರನ್ನು ಘೋಷಿಸುವಾಗ, ಆಗಲೂ ನಾವು ಆದಷ್ಟು ಕಡಿಮೆ ಮಾಹಿತಿ ಬಹಿರಂಗಪಡಿಸುತ್ತೇವೆ;
• ನಿಮ್ಮ ಸ್ಪಷ್ಟ ಒಪ್ಪಿಗೆ ಇದ್ದಾಗ ಅಥವಾ ನೀವು ಸಾಮಾಜಿಕ ಮಾಧ್ಯ ಪುಟಗಳು ಅಥವಾ ಸಾರ್ವಜನಿಕ ಫೋರಂಗಳು ರೀತಿಯ ನಮ್ಮ ಸೇವೆಗಳ ಮೂಲಕ ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸಿದಾಗ; ಮತ್ತು
• ಕಾನೂನು ಅಥವಾ ಸಮಂಜಸವಾದ ಕಾರಣಗಳ ಆಧಾರದ ಮೇಲೆ ಸಾರ್ವಜನಿಕ ಬಹಿರಂಗಪಡಿಸುವಿಕೆಗಳು: ಕಾನೂನುಗಳು ಮತ್ತು ನಿಬಂಧನೆಗಳು, ಕಾನೂನು ಕಾರ್ಯವಿಧಾನಗಳು, ದಾವೆ ಅಥವಾ ಸಮರ್ಥ ಸರಕಾರಿ ಇಲಾಖೆಗಳ ಕೋರಿಕೆಯ ಒಳಗೊಂಡಿರುತ್ತವೆ.
4. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಅಥವಾ ರಕ್ಷಿಸುತ್ತೇವೆ
4.1 Xiaomi ಯ ಭದ್ರತಾ ಸುರಕ್ಷತೆಗಳು
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ನಾವು ಬದ್ಧರಾಗಿದ್ದೇವೆ. ಅನಧಿಕೃತ ಪ್ರವೇಶ, ಬಹಿರಂಗಪಡಿಸುವಿಕೆ ಅಥವಾ ಇತರ ರೀತಿಯ ಅಪಾಯಗಳನ್ನು ತಡೆಗಟ್ಟುವ ಸಲುವಾಗಿ, ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಮತ್ತು Xiaomi ವೆಬ್‌ಸೈಟ್‌ಗಳಲ್ಲಿ ನಾವು ಸಂಗ್ರಹಿಸುವ ಮಾಹಿತಿಯನ್ನು ರಕ್ಷಿಸಲು ಮತ್ತು ಸುರಕ್ಷಿತವಾಗಿರಿಸಲು ಕಾನೂನುಬದ್ಧವಾಗಿ ಅಗತ್ಯವಿರುವ ಎಲ್ಲಾ ಭೌತಿಕ, ಎಲೆಕ್ಟ್ರಾನಿಕ್ ಮತ್ತು ವ್ಯವಸ್ಥಾಪಕ ಕಾರ್ಯವಿಧಾನಗಳನ್ನು ನಾವು ಇರಿಸಿದ್ದೇವೆ. ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸುರಕ್ಷಿತವಾಗಿರಿಸುತ್ತೇವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ.
ಉದಾಹರಣೆಗೆ, ನಿಮ್ಮ Xiaomi ಖಾತೆಯನ್ನು ನೀವು ಪ್ರವೇಶಿಸಿದಾಗ, ಹೆಚ್ಚಿನ ಸುರಕ್ಷತೆಗಾಗಿ ನಮ್ಮ ಎರಡು-ಹಂತದ ಪರಿಶೀಲನೆಯ ಪ್ರೋಗ್ರಾಂ ಬಳಕೆಯನ್ನು ನೀವು ಆರಿಸಿಕೊಳ್ಳಬಹುದು. ಹಾಗೂ ನೀವು ಹೀಗೆ ಮಾಡುವಂತೆ ನಾವೂ ಶಿಫಾರಸು ಮಾಡುತ್ತೇವೆ. ನಿಮ್ಮ ವೈಯಕ್ತಿಕ ಮಾಹಿತಿಯು ನಿಮ್ಮ Xiaomi ಡಿವೈಸ್ ಹಾಗೂ ನಮ್ಮ ಸರ್ವರ್ ನಡುವೆ ವರ್ಗಾವಣೆಗೊಂಡಾಗ, ಆ ಡೇಟಾವನ್ನು Transport Layer Security (TLS) ಹಾಗೂ ಸೂಕ್ತ ಎನ್‌ಕ್ರಿಪ್ಶನ್ ಅಲ್ಗಾರಿದಂಗಳ ಮೂಲಕ ಎನ್‌ಕ್ರಿಪ್ಟ್ ಮಾಡುವುದನ್ನು ನಾವು ಖಾತ್ರಿಪಡಿಸುತ್ತೇವೆ.
ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಿಯಂತ್ರಿತ ವಿಧಾನಗಳ ಮೂಲಕ ರಕ್ಷಿಸಲಾಗುತ್ತದೆ. ನಾವು ಪ್ರಾಮುಖ್ಯತೆ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಿಮ್ಮ ಮಾಹಿತಿಯನ್ನು ವರ್ಗೀಕರಿಸುತ್ತೇವೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯು ಅಗತ್ಯ ಮಟ್ಟದ ಸುರಕ್ಷತೆಯನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ. ನಾವು ಕ್ಲೌಡ್-ಆಧಾರಿತ ಡೇಟಾ ಸಂಗ್ರಹಣೆಗಾಗಿ ವಿಶೇಷ ಪ್ರವೇಶ ನಿಯಂತ್ರಣಗಳನ್ನು ಹೊಂದಿದ್ದೇವೆ ಮತ್ತು ಯಾವುದೇ ಅನಧಿಕೃತ ಪ್ರವೇಶ ಮತ್ತು ಬಳಕೆಯ ವಿರುದ್ಧ ರಕ್ಷಿಸಲು ಭೌತಿಕ ಸುರಕ್ಷತಾ ಕ್ರಮಗಳನ್ನು ಸೇರಿದಂತೆ ನಮ್ಮ ಮಾಹಿತಿ ಸಂಗ್ರಹಣೆ, ಸಂಗ್ರಹಣೆ ಮತ್ತು ಸಂಸ್ಕರಣಾ ಅಭ್ಯಾಸಗಳನ್ನು ನಾವು ನಿಯಮಿತವಾಗಿ ಪರಿಶೀಲಿಸುತ್ತಿರುತ್ತೇವೆ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಮರ್ಥರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ವ್ಯಾಪಾರ ಪಾಲುದಾರರು ಮತ್ತು ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರ ವಿಚಾರದಲ್ಲಿ ಸಾಕಷ್ಟು ಜಾಗರೂಕರಾಗಿರುತ್ತೇವೆ. ಸೂಕ್ತವಾದ ಒಪ್ಪಂದದ ನಿರ್ಬಂಧಗಳನ್ನು ಹೇರುವ ಮೂಲಕ ಮತ್ತು ಅಗತ್ಯವಿರುವಲ್ಲಿ, ಲೆಕ್ಕಪರಿಶೋಧನೆ ಮತ್ತು ಮೌಲ್ಯಮಾಪನಗಳನ್ನು ಕೈಗೊಳ್ಳುವ ಮೂಲಕ ಈ ಥರ್ಡ್ ಪಾರ್ಟಿಗಳು ಸೂಕ್ತವಾದ ಭದ್ರತಾ ಮಾನದಂಡಗಳನ್ನು ನಿರ್ವಹಿಸುತ್ತಾರೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಹೆಚ್ಚುವರಿಯಾಗಿ, ನಮ್ಮ ಉದ್ಯೋಗಿಗಳು, ನಮ್ಮ ವ್ಯಾಪಾರ ಪಾಲುದಾರರು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸುವ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು ಗೌಪ್ಯತೆಯ ಜಾರಿಗೊಳಿಸಬಹುದಾದ ಒಪ್ಪಂದದ ಕಟ್ಟುಪಾಡುಗಳಿಗೆ ಒಳಪಟ್ಟಿರುತ್ತಾರೆ.
ವೈಯಕ್ತಿಕ ಮಾಹಿತಿಯ ರಕ್ಷಣೆಯ ಮಹತ್ವದ ಕುರಿತು ನಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ನಾವು ಭದ್ರತೆ ಮತ್ತು ಗೌಪ್ಯತೆ ರಕ್ಷಣಾ ತರಬೇತಿ ಕೋರ್ಸ್‌ಗಳನ್ನು ಮತ್ತು ಪರೀಕ್ಷೆಗಳನ್ನು ನಡೆಸುತ್ತೇವೆ. ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಸಾಧ್ಯವಿರುವ ಎಲ್ಲಾ ಪ್ರಾಯೋಗಿಕ ಮತ್ತು ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದಾಗ್ಯೂ, ಇಂಟರ್‌ನೆಟ್ ಬಳಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ ಎಂಬುದರ ಕುರಿತು ನಿಮಗೆ ಅರಿವಿರಬೇಕು. ಈ ಕಾರಣದಿಂದ ಇಂಟರ್‌ನೆಟ್ ಮೂಲಕ ನಿಮ್ಮಿಂದ ಅಥವಾ ನಿಮಗೆ ವರ್ಗಾವಣೆಯಾದ ವೈಯಕ್ತಿಕ ಮಾಹಿತಿಯ ಭದ್ರತೆ ಅಥವಾ ಸಮಗ್ರತೆ ಕುರಿತು ನಾವು ಖಾತರಿ ನೀಡುವುದಿಲ್ಲ.
ನಾವು ಅನ್ವಯವಾಗುವ ಡೇಟಾ ಸಂರಕ್ಷಣಾ ಕಾನೂನಿನ ಪ್ರಕಾರ ವೈಯಕ್ತಿಕ ಡೇಟಾ ಉಲ್ಲಂಘನೆಗಳನ್ನು ನಿರ್ವಹಿಸುತ್ತೇವೆ, ಅದು ಅಗತ್ಯವಿದ್ದಲ್ಲಿ, ಸಂಬಂಧಿತ ಡೇಟಾ ಸಂರಕ್ಷಣಾ ಮೇಲ್ವಿಚಾರಣಾ ಪ್ರಾಧಿಕಾರ ಮತ್ತು ಡೇಟಾ ವಿಷಯಗಳಿಗೆ ಉಲ್ಲಂಘನೆಯನ್ನು ತಿಳಿಸುತ್ತೇವೆ.
ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮಾಹಿತಿ ಭದ್ರತೆ ನೀತಿಗಳು ಹಾಗೂ ವಿಧಾನಗಳನ್ನು ವಿನ್ಯಾಸಗೊಳಿಸಲಾಗಿದೆ, ಹಾಗೂ ಪ್ರತಿಯೊಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅವುಗಳನ್ನು ನಿಯಮಿತವಾಗಿ ಥರ್ಡ್-ಪಾರ್ಟಿ ಆಡಿಟ್‌ಗಳಲ್ಲಿ ಉತ್ತೀರ್ಣವಾಗುವಂತೆ ನೋಡಿಕೊಳ್ಳಲಾಗುತ್ತಿದೆ. Xiaomi ಮಾಹಿತಿ ವ್ಯವಸ್ಥೆಯು ಮಾಹಿತಿ ಭದ್ರತೆ ನಿರ್ವಹಣೆ ವ್ಯವಸ್ಥೆಗಳಿಗಾಗಿ (ISMS) ISO/IEC 27001:2013 ಪ್ರಮಾಣೀಕರಣವನ್ನು ಪಡೆದುಕೊಂಡಿದೆ. Xiaomi ಇ-ಕಾಮರ್ಸ್ ಹಾಗೂ Mi ಹೋಮ್/Xiaomi ಹೋಮ್ IoT ಪ್ಲಾಟ್‌ಫಾರ್ಮ್‌ಗಳು ವೈಯಕ್ತಿಕ ಮಾಹಿತಿ ನಿರ್ವಹಣೆ ವ್ಯವಸ್ಥೆ (PIMS) ಗಾಗಿ ISO/IEC 27701:2019 ಪ್ರಮಾಣೀಕರಣವನ್ನು ಪಡೆದುಕೊಂಡಿವೆ. Xiaomi ಆಪರೇಟಿಂಗ್ ಸಿಸ್ಟಂ ಸಾರ್ವಜನಿಕ ಕ್ಲೌಡ್ ವೈಯಕ್ತಿಕ ಮಾಹಿತಿ ರಕ್ಷಣೆಗಾಗಿ ISO/IEC 27018:2019 ಪ್ರಮಾಣೀಕರಣವನ್ನು ಪಡೆದುಕೊಂಡಿದೆ.
4.2 ನೀವು ಏನು ಮಾಡಬಹುದು
Xiaomi ಯಲ್ಲಿ ನಿಮ್ಮ ಖಾತೆ ಭದ್ರತೆಗೆ ಧಕ್ಕೆಯಾಗುವಂತೆ ಇತರ ವೆಬ್‌ಸೈಟ್‌ಗಳಿಗೆ ಪಾಸ್‌ವರ್ಡ್ ಸೋರಿಕೆಯಾದಾಗ, ನೀವು Xiaomi ಸೇವೆಗಳಲ್ಲಿ ಅನನ್ಯ ಪಾಸ್‌ವರ್ಡ್ ಹೊಂದಿಸಬಹುದು. ಮತ್ತು ನೀವು ನಿಮ್ಮ ಪಾಸ್‌ವರ್ಡ್ ಅಥವಾ ಖಾತೆ ಮಾಹಿತಿಯನ್ನು ಯಾರಿಗೂ (ಅಂತಹ ವ್ಯಕ್ತಿಯನ್ನು ನೀವು ಅಧಿಕೃತಗೊಳಿಸದ ಹೊರತು) ಬಹಿರಂಗಪಡಿಸಕೂಡದು. ಸಾಧ್ಯವಾದಾಗಲೆಲ್ಲಾ, ನೀವು ಸ್ವೀಕರಿಸಿದ ಪರಿಶೀಲನಾ ಕೋಡ್ ಅನ್ನು ಯಾರಿಗೂ (Xiaomi ಗ್ರಾಹಕ ಸೇವೆಗೆ ಸಂಬಂಧಿಸಿದವರು ಎಂದು ಹೇಳಿಕೊಳ್ಳುವವರು ಸೇರಿದಂತೆ) ಬಹಿರಂಗಪಡಿಸಬೇಡಿ. Xiaomi ಖಾತೆ ಬಳಕೆದಾರರಾಗಿ ನೀವು Xiaomi ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ, ಅದರಲ್ಲೂ ಬೇರೆ ಯಾರದೋ ಕಂಪ್ಯೂಟರ್‌ನಲ್ಲಿ ಅಥವಾ ಸಾರ್ವಜನಿಕ ಸೈಬರ್ ಕೆಫೆಗಳಲ್ಲಿ ಲಾಗಿನ್ ಆದಾಗ, ನಿಮ್ಮ ಸೆಶನ್‌ನ ಕೊನೆಯ ಹಂತದಲ್ಲಿ ಲಾಗ್ ಔಟ್ ಆಗಬೇಕು.
ನಿಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ನೀವು ವಿಫಲರಾಗಿ, ಅದರಿಂದಾಗಿ ಥರ್ಡ್ ಪಾರ್ಟಿಯು ನಿಮ್ಮ ವೈಯಕ್ತಿಕ ಮಾಹಿತಿಗೆ ಲಗ್ಗೆ ಹಾಕಿದರೆ ಅದಕ್ಕೆ Xiaomi ಸಂಸ್ಥೆಯು ಯಾವ ಕಾರಣಕ್ಕೂ ಜವಾಬ್ದಾರವಾಗಿರುವುದಿಲ್ಲ. ಅದೇನೇ ಆಗಲಿ, ನಿಮ್ಮ ಖಾತೆಗೆ ಯಾವುದೇ ಇತರೆ ಇಂಟರ್‌ನೆಟ್ ಬಳಕೆದಾರರು ಅನಧಿಕೃತವಾಗಿ ಪ್ರವೇಶಿಸಿದ್ದರೆ ಅಥವಾ ಬೇರಾವುದೇ ರೀತಿಯ ಭದ್ರತಾ ಉಲ್ಲಂಘನೆಯಾಗಿದ್ದರೆ, ಆ ಕ್ಷಣದಲ್ಲಿಯೇ ನಮಗೆ ತಿಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ರಕ್ಷಿಸಲು ನಿಮ್ಮ ಸಹಕಾರವು ನಮಗೆ ಸಹಾಯ ಮಾಡುತ್ತದೆ.
4.3 ಡಿವೈಸ್‌ನಲ್ಲಿ ಇತರೆ ಫೀಚರ್‌ಗಳನ್ನು ಪ್ರವೇಶಿಸುವುದು
ನಮ್ಮ ಆ್ಯಪ್‌ಗಳು ನಿಮ್ಮ ಡಿವೈಸ್‌ನಲ್ಲಿರುವ ಕೆಲವು ಫೀಚರ್‌ಗಳನ್ನು ಪ್ರವೇಶಿಸಬಹುದಾಗಿದೆ, ಉದಾಹರಣೆಗೆ, ಸಂಪರ್ಕಗಳನ್ನು, ಎಸ್‌ಎಂಎಸ್ ಸಂಗ್ರಹಣೆ ಮತ್ತು ವೈ-ಫೈ ನೆಟ್‌ವರ್ಕ್ ಸ್ಥಿತಿಯನ್ನು ಬಳಸಲು ಇಮೇಲ್‌ಗೆ ಅನುಮತಿಸುವುದು. ಆ್ಯಪ್‌ಗಳನ್ನು ನಿಮ್ಮ ಡಿವೈಸ್‌ನಲ್ಲಿ ರನ್ ಮಾಡಲು ಈ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಆ್ಯಪ್‌ಗಳೊಂದಿಗೆ ಸಂವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಈ ಫೀಚರ್‌ಗಳನ್ನು ನಿಮ್ಮ ಡಿವೈಸ್‌ನಲ್ಲಿ https://privacy.mi.com/support ನಲ್ಲಿ ನಮ್ಮನ್ನು ಸಂಪರ್ಕಿಸುವ ಮೂಲಕ ಯಾವ ಸಮಯದಲ್ಲಾದರೂ ಆಫ್ ಮಾಡಬಹುದು.
4.4 ಕಾಯ್ದಿರಿಸಿಕೊಳ್ಳುವ ನೀತಿ
ಈ ಗೌಪ್ಯತೆ ನೀತಿಯಲ್ಲಿ ವಿವರಿಸಿದ ಮಾಹಿತಿ ಸಂಗ್ರಹದ ಉದ್ದೇಶಕ್ಕಾಗಿ ಅಥವಾ ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಗಾಗಿ ಒದಗಿಸಲಾದ ಯಾವುದೇ ಪ್ರತ್ಯೇಕ ಗೌಪ್ಯತೆ ನೀತಿಗೆ ಅಥವಾ ಅನ್ವಯಿಸುವ ಕಾನೂನುಗಳಿಗೆ ಅಗತ್ಯವಿರುವ ಅವಧಿಯವರೆಗೆ ನಾವು ವೈಯಕ್ತಿಕ ಮಾಹಿತಿಯನ್ನು ಉಳಿಸಿಕೊಳ್ಳುತ್ತೇವೆ. ವಿವರವಾದ ಕಾಯ್ದಿರಿಸಿಕೊಳ್ಳುವ ಅವಧಿಗಳನ್ನು ನಿರ್ದಿಷ್ಟ ಸೇವೆ ಅಥವಾ ಸಂಬಂಧಿತ ಉತ್ಪನ್ನ ಪುಟದಲ್ಲಿ ನಿರ್ದಿಷ್ಟಪಡಿಸಲಾಗಿದೆ. ಒಮ್ಮೆ ಸಂಗ್ರಹಣೆಯ ಉದ್ದೇಶ ಈಡೇರಿದ ನಂತರ ಅಥವಾ ಅಳಿಸುವಿಕೆಗಾಗಿ ನಿಮ್ಮ ವಿನಂತಿಯನ್ನು ನಾವು ಖಚಿತಪಡಿಸಿದ ನಂತರ ಅಥವಾ ಅನುಗುಣವಾದ ಉತ್ಪನ್ನ ಅಥವಾ ಸೇವೆಯ ಕಾರ್ಯಾಚರಣೆಯನ್ನು ನಾವು ಕೊನೆಗೊಳಿಸಿದ ನಂತರ ವೈಯಕ್ತಿಕ ಮಾಹಿತಿಯನ್ನು ಉಳಿಸಿಕೊಳ್ಳುವುದು ಮತ್ತು ಅಳಿಸುವುದು ಅಥವಾ ಅನಾಮಧೇಯಗೊಳಿಸುವುದನ್ನು ನಾವು ನಿಲ್ಲಿಸುತ್ತೇವೆ. ಸಾಧ್ಯವಾದಾಗ, ವೈಯಕ್ತಿಕ ಡೇಟಾದ ಗುರುತಿಸಿದ ವರ್ಗಗಳು, ಪ್ರಕಾರಗಳು ಅಥವಾ ಐಟಂಗಳನ್ನು ನಾವು ಎಷ್ಟು ಕಾಲಕಾಯ್ದಿರಿಸಿಕೊಳ್ಳುತ್ತೇವೆ ಎಂಬುದನ್ನು ಈಗಾಗಲೇ ಸೂಚಿಸಿದ್ದೇವೆ. ಈ ಕಾಯ್ದಿರಿಸಿಕೊಳ್ಳುವ ಅವಧಿಯನ್ನು ನಿರ್ಧರಿಸುವಾಗ, ಈ ಕೆಳಗಿನ ಮಾನದಂಡವನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ:
• ವೈಯಕ್ತಿಕ ಮಾಹಿತಿಯ ಪ್ರಮಾಣ, ಅದರ ಪ್ರಕಾರ ಹಾಗೂ ಅದರ ಸೂಕ್ಷ್ಮತೆ;
• ಅನಧಿಕೃತ ಬಳಕೆ ಅಥವಾ ಬಹಿರಂಗಪಡಿಸುವುದರಿಂದ ಆಗುವ ಅಪಾಯ;
• ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ನಮ್ಮ ಉದ್ದೇಶಗಳು ಹಾಗೂ ಈ ಉದ್ದೇಶಗಳ ಈಡೇರಿಕೆಗೆ ಎಷ್ಟು ಕಾಲ ಈ ಮಾಹಿತಿಯ ಅಗತ್ಯ ನಮಗಿದೆ ಎಂಬುದು;
• ವೈಯಕ್ತಿಕ ಮಾಹಿತಿಯು ಎಷ್ಟು ಕಾಲ ನಿಖರವಾಗಿರುತ್ತದೆ ಹಾಗೂ ಅಪ್ ಟು ಡೇಟ್ ಆಗಿರುವ ಸಾಧ್ಯತೆ ಇರುತ್ತದೆ;
• ಸಂಭಾವ್ಯ ಭವಿಷ್ಯದ ಕಾನೂನು ಕ್ಲೈಮ್‌ಗಳಿಗೆ ವೈಯಕ್ತಿಕ ಮಾಹಿತಿಯು ಎಷ್ಟರ ಮಟ್ಟಿಗೆ ಪ್ರಸ್ತುತವಿದೆ; ಮತ್ತು
• ಕೆಲವು ದಾಖಲೆಗಳನ್ನು ಎಷ್ಟು ಕಾಲ ಇರಿಸಿಕೊಳ್ಳಬೇಕು ಎಂಬುದನ್ನು ನಿರ್ಧಿಷ್ಟವಾಗಿ ತಿಳಿಸುವ ಅನ್ವಯವಾಗುವ ಕಾನೂನು, ಅಕೌಂಟಿಂಗ್, ವರದಿ ಮಾಡುವಿಕೆ ಅಥವಾ ನಿರ್ಬಂಧ ಅಗತ್ಯಗಳು ಅವಶ್ಯಕತೆಗಳು.
ನಿಮ್ಮ ಕಾನೂನು ವ್ಯಾಪ್ತಿಯ ಆಧಾರದ ಮೇಲೆ, ಇದಕ್ಕೆ ಅಪವಾದವೆಂದರೆ ಸಾರ್ವಜನಿಕ ಹಿತಾಸಕ್ತಿ, ವೈಜ್ಞಾನಿಕ, ಐತಿಹಾಸಿಕ ಸಂಶೋಧನೆ ಅಥವಾ ಸಂಖ್ಯಾಶಾಸ್ತ್ರೀಯ ಉದ್ದೇಶಗಳಿಗಾಗಿ ನಾವು ಪ್ರಕ್ರಿಯೆಗೊಳಿಸುತ್ತಿರುವ ವೈಯಕ್ತಿಕ ಮಾಹಿತಿ. Xiaomi ಈ ರೀತಿಯ ಮಾಹಿತಿಯನ್ನು ಅದರ ಪ್ರಮಾಣಿತ ಕಾಯ್ದಿರಿಸಿಕೊಳ್ಳುವಿಕೆ ಅವಧಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳುವುದನ್ನು ಮುಂದುವರಿಸುತ್ತದೆ, ಮುಂದಿನ ಡೇಟಾ ಸಂಸ್ಕರಣೆಯು ಸಂಗ್ರಹದ ಮೂಲ ಉದ್ದೇಶಕ್ಕೆ ಸಂಬಂಧಿಸದಿದ್ದರೂ ಸಹ ಅಲ್ಲಿ ಅಗತ್ಯಕ್ಕೆ ತಕ್ಕಂತೆ ಅನ್ವಯವಾಗುವ ಕಾನೂನುಗಳು ಅಥವಾ ನಿಮ್ಮ ವಿನಂತಿಯ ಆಧಾರದ ಮೇಲೆ ಅನುಮತಿ ನೀಡಲಾಗುತ್ತದೆ.
5. ನಿಮ್ಮ ಹಕ್ಕುಗಳು
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸುವ ಸಾಮರ್ಥ್ಯ ನಿಮಗಿರುತ್ತದೆ.
5.1 ನಿಯಂತ್ರಣದ ಸೆಟ್ಟಿಂಗ್‌ಗಳು
ಗೌಪ್ಯತೆ ಕಾಳಜಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ ಎಂಬುದನ್ನು Xiaomi ಗುರುತಿಸುತ್ತದೆ. ಆದ್ದರಿಂದ, ನಿಮ್ಮ ವೈಯಕ್ತಿಕ ಮಾಹಿತಿಯ ಸಂಗ್ರಹಣೆ, ಬಳಕೆ, ಬಹಿರಂಗಪಡಿಸುವಿಕೆ ಅಥವಾ ಸಂಸ್ಕರಣೆಯನ್ನು ನಿರ್ಬಂಧಿಸಲು ಮತ್ತು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು Xiaomi ನಿಮಗೆ ಒದಗಿಸುವ ವಿಧಾನಗಳ ಉದಾಹರಣೆಗಳನ್ನು ನಾವು ಒದಗಿಸುತ್ತೇವೆ:
• ಬಳಕೆದಾರ ಅನುಭವ ಪ್ರೋಗ್ರಾಂ ಮತ್ತು ಸ್ಥಳ ಆ್ಯಕ್ಸೆಸ್ ಫೀಚರ್‌ಗಳನ್ನು ಆನ್/ ಆಫ್ ಮಾಡುವುದು;
• Xiaomi ಖಾತೆಯಿಂದ ಸೈನ್ ಇನ್ ಅಥವಾ ಸೈನ್ ಔಟ್ ಮಾಡುವುದು;
• Xiaomi ಕ್ಲೌಡ್ ಸಿಂಕ್ ಆನ್ ಅಥವಾ ಆಫ್ ಮಾಡುವುದು;
• https://i.mi.com ಮೂಲಕ Xiaomi ಕ್ಲೌಡ್‌ನಲ್ಲಿ ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು ಅಳಿಸುವುದು;
• ಸೂಕ್ಷ್ಮ ಅಥವಾ ವೈಯಕ್ತಿಕ ಮಾಹಿತಿಯೊಂದಿಗೆ ವ್ಯವಹರಿಸುವ ಇತರ ಸೇವೆಗಳು ಮತ್ತು ಫೀಚರ್‌ಗಳಿಗಾಗಿ ಆನ್ ಅಥವಾ ಆಫ್ ಮಾಡಿ. ನೀವು ಭದ್ರತೆಯ ಆ್ಯಪ್‌ನಲ್ಲಿ ನಿಮ್ಮ ಡಿವೈಸ್‌ನ ಸುರಕ್ಷತಾ ಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಪಡೆಯಬಹುದು.
ಮೇಲೆ ತಿಳಿಸಿರುವ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಳ್ಳಲು ನೀವು ಈ ಹಿಂದೆ ನಮಗೆ ಒಪ್ಪಿಗೆ ನೀಡಿದ್ದಲ್ಲಿ https://privacy.mi.com/support ನಲ್ಲಿ ನಮ್ಮನ್ನು ಸಂಪರ್ಕಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಬದಲಾಯಿಸಬಹುದು.
5.2 ನಿಮ್ಮ ವೈಯಕ್ತಿಕ ಮಾಹಿತಿಗೆ ನಿಮ್ಮ ಹಕ್ಕುಗಳು
ಅನ್ವಯಿಸುವ ಕಾನೂನುಗಳು ಮತ್ತು ನಿಬಂಧನೆಗಳ ಆಧಾರದ ಮೇಲೆ ನಿಮ್ಮ ಕುರಿತು ನಾವು ಹೊಂದಿರುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು, ಸರಿಪಡಿಸಲು ಮತ್ತು ಅಳಿಸಲು (ಹಾಗೂ ಕೆಲವು ಇತರೆ ಹಕ್ಕುಗಳು) ನೀವು ಹಕ್ಕನ್ನು ಹೊಂದಿರುತ್ತೀರಿ (ವಿನಂತಿಯಂತೆ ಇನ್ನು ಮುಂದೆ ಇದನ್ನು ಉಲ್ಲೇಖಿಸಲಾಗುತ್ತದೆ). ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಈ ಹಕ್ಕುಗಳಿಗೆ ನಿರ್ದಿಷ್ಟ ಹೊರಗಿಡುವಿಕೆಗಳು ಹಾಗೂ ವಿನಾಯ್ತಿಗಳು ಅನ್ವಯವಾಗಬಹುದು.
https://account.xiaomi.com ನಲ್ಲಿ ಅಥವಾ ನಿಮ್ಮ ಡಿವೈಸ್‌ನಲ್ಲಿ ನಿಮ್ಮ ಖಾತೆಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ Xiaomi ಖಾತೆಯಲ್ಲಿ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು ಸಹ ನೀವು ಪ್ರವೇಶಿಸಬಹುದು ಅಥವಾ ಅಪ್‌ಡೇಟ್ ಮಾಡಬಹುದು. ಹೆಚ್ಚುವರಿ ಮಾಹಿತಿಗಾಗಿ, ನಮ್ಮನ್ನು https://privacy.mi.com/support ನಲ್ಲಿ ಸಂಪರ್ಕಿಸಿ.
ನಿಮ್ಮ ವಿನಂತಿಯು ಈ ಕೆಳಗಿನ ಷರತ್ತುಗಳಿಗೆ ಬದ್ಧವಾಗಿದ್ದರೆ, ಅದನ್ನು ನಾವು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ:
(1) ಈ ಮೇಲೆ ವಿವರಿಸಲಾದ Xiaomiಯ ವಿಶೇಷ ವಿನಂತಿಯ ಚಾನಲ್ ಮೂಲಕ ವಿನಂತಿಯನ್ನು ಸಲ್ಲಿಸಿರಬೇಕು. ಮತ್ತು ನಿಮ್ಮ ಮಾಹಿತಿ ಸುರಕ್ಷತೆಯ ರಕ್ಷಣೆಗಾಗಿ, ನಿಮ್ಮ ವಿನಂತಿಯು ಲಿಖಿತ ರೂಪದಲ್ಲಿರಬೇಕು (ಸ್ಥಳೀಯ ಕಾನೂನು ಮೌಖಿಕ ವಿನಂತಿಯನ್ನು ಸ್ಪಷ್ಟವಾಗಿ ಗುರುತಿಸದ ಹೊರತು);
(2) ನಿಮ್ಮ ಗುರುತನ್ನು ದೃಢೀಕರಿಸಲು ಮತ್ತು ವಿನಂತಿಸಿದ ಮಾಹಿತಿಗೆ ನಿಜವಾದ ಹಕ್ಕುದಾರರು ಅಥವಾ ಕಾನೂನುಬದ್ಧ ಅಧಿಕೃತ ವ್ಯಕ್ತಿ ನೀವೇ ಎಂಬುದನ್ನು ಖಚಿತಪಡಿಸಿಕೊಳ್ಳಲು Xiaomi ಗೆ ಸಾಧ್ಯವಾಗುವಂತೆ ಸಾಕಷ್ಟು ಮಾಹಿತಿಯನ್ನು ಒದಗಿಸಬೇಕು.
ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಬಹುದು ಎಂಬುದನ್ನು ಖಚಿತಪಡಿಸಲು ಅವಶ್ಯವಿರುವ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ ಬಳಿಕ, ನಿಮ್ಮ ಅನ್ವಯಿಸುವ ಡೇಟಾ ರಕ್ಷಣೆಯ ಕಾನೂನುಗಳ ಅಡಿಯಲ್ಲಿ ಹೊಂದಿಸಿದ ಯಾವುದೇ ಕಾಲಾವಧಿಯೊಳಗೆ ನಿಮ್ಮ ವಿನಂತಿಗೆ ಸ್ಪಂದಿಸುತ್ತೇವೆ.
ವಿವರವಾಗಿ:
• ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ಹಕ್ಕುಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಸ್ಪಷ್ಟ, ಪಾರದರ್ಶಕ ಮತ್ತು ಸುಲಭವಾಗಿ ಅರ್ಥವಾಗುವ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿರುತ್ತದೆ. ಅದಕ್ಕಾಗಿಯೇ ನಾವು ಈ ಗೌಪ್ಯತೆ ನೀತಿಯಲ್ಲಿನ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ.
ಅನ್ವಯವಾಗುವ ಕಾನೂನುಗಳ ಅಗತ್ಯತೆಗಳ ಆಧಾರದ ಮೇಲೆ, ನಮ್ಮ ಮೂಲಕ ಸಂಗ್ರಹಿಸಿದ ಮತ್ತು ಪ್ರಕ್ರಿಯೆಗೊಳಿಸಿದ ನಿಮ್ಮ ವೈಯಕ್ತಿಕ ಮಾಹಿತಿಯ ನಕಲನ್ನು ನಿಮ್ಮ ವಿನಂತಿಯ ಆಧಾರದ ಮೇಲೆ ನಿಮಗೆ ಉಚಿತವಾಗಿ ಒದಗಿಸಲಾಗುತ್ತದೆ. ಸಂಬಂಧಿತ ಮಾಹಿತಿಗಾಗಿ ಯಾವುದೇ ಹೆಚ್ಚುವರಿ ವಿನಂತಿಗಳಿಗೆ, ಅನ್ವಯವಾಗುವ ಕಾನೂನುಗಳ ಅನುಮತಿಯಿದ್ದರೆ ನಿಜವಾದ ಆಡಳಿತಾತ್ಮಕ ವೆಚ್ಚಗಳ ಆಧಾರದ ಮೇಲೆ ನಾವು ಸೂಕ್ತ ಶುಲ್ಕವನ್ನು ವಿಧಿಸಬಹುದು.
• ನಾವು ನಿಮ್ಮ ಕುರಿತಾಗಿ ಇರಿಸಿಕೊಂಡಿರುವ ಯಾವುದೇ ಮಾಹಿತಿಯು ತಪ್ಪಾಗಿದ್ದರೆ ಅಥವಾ ಅಪೂರ್ಣವಾಗಿದ್ದರೆ, ಬಳಕೆಯ ಉದ್ದೇಶದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸರಿಪಡಿಸಲು ಅಥವಾ ಪೂರ್ಣಗೊಳಿಸಲು ನಿಮಗೆ ಅರ್ಹತೆ ಇರುತ್ತದೆ.
• ಅನ್ವಯವಾಗುವ ಕಾನೂನುಗಳ ಅಗತ್ಯತೆಗಳ ಆಧಾರದ ಮೇಲೆ, ನಾವು ಅದನ್ನು ಬಳಸುವುದಕ್ಕೆ ಯಾವುದೇ ಬಲವಾದ ಕಾರಣವಿಲ್ಲದಿದ್ದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸಲು ಅಥವಾ ತೆಗೆದುಹಾಕಲು ವಿನಂತಿಸುವ ಹಕ್ಕು ನಿಮಗಿರುತ್ತದೆ. ನಿಮ್ಮ ಅಳಿಸುವಿಕೆ ವಿನಂತಿಗೆ ಸಂಬಂಧಿಸಿದ ಸಕಾರಣಗಳನ್ನು ನಾವು ಪರಿಗಣಿಸುತ್ತೇವೆ ಹಾಗೂ ತಾಂತ್ರಿಕ ಕ್ರಮಗಳನ್ನು ಒಳಗೊಂಡಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನ್ವಯವಾಗುವ ಕಾನೂನು ಮತ್ತು/ಅಥವಾ ತಾಂತ್ರಿಕ ಮಿತಿಗಳ ಕಾರಣದಿಂದಾಗಿ ಬ್ಯಾಕಪ್ ಸಿಸ್ಟಂನಿಂದ ಮಾಹಿತಿಯನ್ನು ತಕ್ಷಣ ತೆಗೆದುಹಾಕಲು ನಮಗೆ ಸಾಧ್ಯವಾಗದಿರಬಹುದು ಎಂಬುದು ನಿಮಗೆ ತಿಳಿದಿರಲಿ. ಈ ಸಂದರ್ಭದಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸುರಕ್ಷಿತವಾಗಿ ಸಂಗ್ರಹಿಸುತ್ತೇವೆ ಮತ್ತು ಬ್ಯಾಕಪ್ ಅನ್ನು ತೆರವುಗೊಳಿಸುವವರೆಗೆ ಅಥವಾ ಅನಾಮಧೇಯರನ್ನಾಗಿ ಮಾಡುವವರೆಗೆ ಅದನ್ನು ಯಾವುದೇ ಮುಂದಿನ ಪ್ರಕ್ರಿಯೆಯಿಂದ ಪ್ರತ್ಯೇಕಿಸುತ್ತೇವೆ.
• ನೇರ ಮಾರುಕಟ್ಟೆಗಾಗಿ ಪ್ರಕ್ರಿಯೆ ಮಾಡುವುದು (ಪ್ರೊಫೈಲಿಂಗ್ ಅನ್ನು ಬಳಸುವುದು ಸೇರಿದಂತೆ) ಒಳಗೊಂಡಂತೆ ಕೆಲವು ರೀತಿಯ ಪ್ರಕ್ರಿಯೆಗೊಳಿಸುವಿಕೆ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಕ್ರಿಯೆಗೆ ಕಾನೂನುಬದ್ಧ ಆಧಾರ (ಪ್ರೊಫೈಲಿಂಗ್ ಸೇರಿದಂತೆ) ನಮ್ಮ ಕಾನೂನುಬದ್ಧ ಹಿತಾಸಕ್ತಿಗಳನ್ನು ಆಕ್ಷೇಪಿಸುವ ಹಕ್ಕನ್ನು ನೀವು ಹೊಂದಿರುತ್ತೀರಿ.
ವಿಶೇಷವಾಗಿ ಕೆಲವು ಕಾನೂನು ವ್ಯಾಪ್ತಿಯ ಕಾನೂನುಗಳ ಅಡಿಯಲ್ಲಿ:
• ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ನಿರ್ಬಂಧಿಸುವಂತೆ ವಿನಂತಿಸುವ ಹಕ್ಕು ನಿಮಗಿರುತ್ತದೆ. ನಿಮ್ಮ ನಿರ್ಬಂಧದ ವಿನಂತಿಗೆ ಸಂಬಂಧಿಸಿದ ಸಕಾರಣಗಳನ್ನು ನಾವು ಪರಿಗಣಿಸುತ್ತೇವೆ. GDPR ಗೆ ಆಧಾರಗಳು ಅನ್ವಯವಾಗಿದ್ದರೆ, GDPR ನಲ್ಲಿ ಅನ್ವಯವಾಗುವ ಸಂದರ್ಭಗಳಲ್ಲಿ ಮಾತ್ರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ ಮತ್ತು ಪ್ರಕ್ರಿಯೆಯ ನಿರ್ಬಂಧವನ್ನು ತೆಗೆದುಹಾಕುವ ಮೊದಲು ನಿಮಗೆ ತಿಳಿಸುತ್ತೇವೆ.
• ನಿಮಗೆ ಸಂಬಂಧಿಸಿದ ಕಾನೂನು ಪರಿಣಾಮಗಳಿಗೆ ಕಾರಣವಾಗುವ ಅಥವಾ ಅದೇ ರೀತಿ ನಿಮ್ಮ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರೊಫೈಲಿಂಗ್ ಸೇರಿದಂತೆ, ಸ್ವಯಂಚಾಲಿತ ಪ್ರಕ್ರಿಯೆಯ ಆಧಾರದ ಮೇಲೆ ನಿರ್ಧಾರಕ್ಕೆ ಒಳಪಡದಿರುವ ಹಕ್ಕು ನಿಮಗಿರುತ್ತದೆ.
• ನಿಮ್ಮ ವೈಯಕ್ತಿಕ ಮಾಹಿತಿಗಾಗಿ ರಚನಾತ್ಮಕ, ಸಾಮಾನ್ಯವಾಗಿ ಬಳಸುವ ಫಾರ್ಮ್ಯಾಟ್‌ನಲ್ಲಿ ಅನ್ವಯಿಸಲು ಮತ್ತು ಮಾಹಿತಿಯನ್ನು ಮತ್ತೊಂದು ಡೇಟಾ ನಿಯಂತ್ರಕಕ್ಕೆ (ಡೇಟಾ ಪೊರ್ಟಬಿಲಿಟಿ) ವರ್ಗಾಯಿಸಲು ನೀವು ಹಕ್ಕನ್ನು ಹೊಂದಿರುತ್ತೀರಿ.
ವಿನಂತಿಗಳನ್ನು ಪ್ರಕ್ರಿಯೆಗೊಳಿಸುವುದನ್ನು ತಿರಸ್ಕರಿಸುವ ಹಕ್ಕು ನಮಗಿರುತ್ತದೆ ಅಥವಾ ವಿನಾಯ್ತಿ ಅನ್ವಯವಾಗುವ ವಿನಂತಿಯ ಒಂದಿಷ್ಟು ಭಾಗಕ್ಕೆ ಮಾತ್ರ ಪ್ರಕ್ರಿಯೆಗೊಳಿಸುವ ಹಕ್ಕು ನಮಗಿರುತ್ತದೆ. ವಿನಂತಿ ಮೇಲ್ತೋರಿಕೆಗೆ ಕಾಣಿಸದಿದ್ದರೆ ಅಥವಾ ಮೇಲ್ತೋರಿಕೆಗೆ ಹೆಚ್ಚಾಗಿದ್ದರೆ ಅಥವಾ ಥರ್ಡ್ ಪಾರ್ಟಿಗಳ ಮಾಹಿತಿಯನ್ನು ಬಹಿರಂಗಗೊಳಿಸುವ ಅಗತ್ಯವಿದ್ದಾಗ ಹೀಗೆ ವಿನಂತಿಗಳ ಪ್ರಕ್ರಿಯೆಯನ್ನು ತಿರಸ್ಕರಿಸುವ ಹಕ್ಕು ನಮಗಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಅನ್ವಯವಾಗುವ ಕಾನೂನುಗಳ ಅನುಮತಿಯೊಂದಿಗೆ, ನಾವು ಶುಲ್ಕ ವಿಧಿಸಬಹುದು. ಮಾಹಿತಿಯನ್ನು ಅಳಿಸಲು ಮಾಡಲಾದ ವಿನಂತಿಯ ಕೆಲವು ಅಂಶಗಳು ಮೇಲೆ ತಿಳಿಸಿದ ವಂಚನೆ-ವಿರೋಧಿ ಮತ್ತು ಭದ್ರತಾ ಉದ್ದೇಶಗಳಿಗಾಗಿ ಮಾಹಿತಿಯನ್ನು ಕಾನೂನು ಸಂಸ್ಥೆಗಾಗಿ, ಕಾನೂನು ಕ್ಲೈಮ್‌ಗಳನ್ನು ಜಾರಿ ಮಾಡಲು ಅಥವಾ ಪ್ರತಿವಾದ ಮಾಡಲೋಸುಗ ಕಾನೂನುಬದ್ಧವಾಗಿ ಬಳಸಲು ನಮ್ಮ ಅಸಮರ್ಥತೆಗೆ ಕಾರಣವಾಗಬಹುದು ಎಂದು ನಾವು ಭಾವಿಸಿದರೆ, ಅದನ್ನು ಸಹ ತಿರಸ್ಕರಿಸಬಹುದು.
5.3 ಒಪ್ಪಿಗೆಯನ್ನು ಹಿಂತೆಗೆದುಕೊಳ್ಳುವುದು
ನಮ್ಮ ಸ್ವಾಧೀನ ಅಥವಾ ನಿಯಂತ್ರಣದಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು, ಬಳಸುವುದು ಮತ್ತು/ಅಥವಾ ಬಹಿರಂಗಪಡಿಸುವುದು ಸೇರಿದಂತೆ ನಿರ್ದಿಷ್ಟ ಉದ್ದೇಶಕ್ಕಾಗಿ ನಮಗೆ ಈ ಹಿಂದೆ ಒದಗಿಸಿದ ನಿಮ್ಮ ಒಪ್ಪಿಗೆಯನ್ನು ವಿನಂತಿಯನ್ನು ಸಲ್ಲಿಸುವ ಮೂಲಕ ನೀವು ಹಿಂಪಡೆಯಬಹುದು. ನೀವು ಬಳಸುತ್ತಿರುವ ನಿರ್ಧಿಷ್ಟ ಸೇವೆಗಳ ಆಧಾರದ ಮೇಲೆ, ನೀವು ನಮ್ಮನ್ನು https://privacy.mi.com/support ನಲ್ಲಿ ಸಂಪರ್ಕಿಸಬಹುದು. ನಿಮ್ಮ ವಿನಂತಿಯನ್ನು ಸೂಕ್ತ ಸಮಯದಲ್ಲಿ ಪ್ರಕ್ರಿಯೆಗೊಳಿಸುತ್ತೇವೆ. ಹಾಗೂ, ಬಳಿಕ ಅದರ ಪ್ರಕಾರವಾಗಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ, ಬಳಸುವುದಿಲ್ಲ ಮತ್ತು/ಅಥವಾ ಬಹಿರಂಗಪಡಿಸುವುದಿಲ್ಲ.
ನಿಮ್ಮ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳುವ ವ್ಯಾಪ್ತಿಯನ್ನು ಆಧರಿಸಿ, Xiaomi ನ ಉತ್ಪನ್ನಗಳು ಮತ್ತು ಸೇವೆಗಳ ಸಂಪೂರ್ಣ ಪ್ರಯೋಜನ ಪಡೆಯುವುದನ್ನು ಮುಂದುವರಿಸಲು ನಿಮಗೆ ಸಾಧ್ಯವಾಗದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ಒಪ್ಪಿಗೆ ಅಥವಾ ದೃಢೀಕರಣವನ್ನು ಹಿಂತೆಗೆದುಕೊಳ್ಳುವಿಕೆಯು ಹಿಂಪಡೆಯುವ ಹಂತದವರೆಗಿನ ಒಪ್ಪಿಗೆಯ ಆಧಾರದ ಮೇಲೆ ನಡೆಸಲಾದ ನಮ್ಮ ಪ್ರಕ್ರಿಯೆಯ ಮಾನ್ಯತೆಯ ಮೇಲೆ ಪರಿಣಾಮ ಬೀರುವುದಿಲ್ಲ.
5.4 ಸೇವೆ ಅಥವಾ ಖಾತೆಯನ್ನು ರದ್ದುಪಡಿಸುವಿಕೆ
ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಯನ್ನು ರದ್ದುಗೊಳಿಸಲು ನೀವು ಬಯಸಿದ್ದರೆ, ನೀವು https://privacy.mi.com/support ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ನೀವು Xiaomi ಖಾತೆಯನ್ನು ರದ್ದುಗೊಳಿಸುವುದಾದರೆ, ಹಾಗೆ ರದ್ದು ಮಾಡುವುದರಿಂದ Xiaomi ಯ ಉತ್ಪನ್ನಗಳು ಮತ್ತು ಸೇವೆಗಳ ಸಂಪೂರ್ಣ ವ್ಯಾಪ್ತಿಯ ಬಳಕೆಯಿಂದ ನಿಮ್ಮನ್ನು ದೂರವಿಡುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಕೆಲವು ಸಂದರ್ಭಗಳಲ್ಲಿ ರದ್ದು ಮಾಡುವಿಕೆಯನ್ನು ತಡೆಯಬಹುದು ಅಥವಾ ವಿಳಂಬಗೊಳಿಸಬಹುದು. ಉದಾಹರಣೆಗೆ, Mi ಸಂಗೀತದ ಪಾವತಿಸದ ಸದಸ್ಯ ಸೇವೆ, ಥೀಮ್ಸ್ ಸ್ಟೋರ್‌ಗಳಲ್ಲಿ ಪಾವತಿಸಿದ ಥೀಮ್ ಅಥವಾ Mi ಫೈನಾನ್ಸ್‌ನಲ್ಲಿ ಪಾವತಿಸದ ಸಾಲ ಮುಂತಾದ ನಿಮ್ಮ ಖಾತೆಯಲ್ಲಿ ಬಾಕಿ ಉಳಿದಿರುವ ಹಣ ಇನ್ನೂ ಇದ್ದಲ್ಲಿ, ನಿಮ್ಮ ವಿನಂತಿಯನ್ನು ನಾವು ತಕ್ಷಣ ಬೆಂಬಲಿಸಲು ಸಾಧ್ಯವಿಲ್ಲ.
ನೀವು ಥರ್ಡ್-ಪಾರ್ಟಿ ಖಾತೆಯ ಮೂಲಕ ಲಾಗಿನ್ ಮಾಡಿದಾಗ, ನೀವು ಥರ್ಡ್ ಪಾರ್ಟಿಯಿಂದ ಖಾತೆಯನ್ನು ರದ್ದುಗೊಳಿಸಲು ನೀವು ಅನ್ವಯಿಸಬೇಕಾಗುತ್ತದೆ.
6. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಜಾಗತಿಕವಾಗಿ ವರ್ಗಾಯಿಸುವ ಬಗೆ
Xiaomi ಜಾಗತಿಕ ಕಾರ್ಯಾಚರಣೆ ಮತ್ತು ನಿಯಂತ್ರಣ ಮೂಲಸೌಕರ್ಯದ ಮೂಲಕ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಬ್ಯಾಕಪ್ ಮಾಡುತ್ತದೆ. ಪ್ರಸ್ತುತ Xiaomi ಚೈನಾ, ಭಾರತ, ನೆದರ್‌ಲ್ಯಾಂಡ್ಸ್, ರಷ್ಯಾ ಮತ್ತು ಸಿಂಗಪುರ್‌ನಲ್ಲಿ ಡೇಟಾ ಕೇಂದ್ರಗಳನ್ನು ಹೊಂದಿದೆ. ಗೌಪ್ಯತೆ ನೀತಿಯಲ್ಲಿ ವಿವರಿಸಿದ ಉದ್ದೇಶಗಳಿಗಾಗಿ, ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ನಿಮ್ಮ ಮಾಹಿತಿಯನ್ನು ಈ ಡೇಟಾ ಕೇಂದ್ರಗಳಿಗೆ ವರ್ಗಾಯಿಸಬಹುದಾಗಿದೆ.
ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಥರ್ಡ್-ಪಾರ್ಟಿ ಸೇವಾ ಪೂರೈಕೆದಾರರು ಮತ್ತು ವ್ಯಾಪಾರ ಪಾಲುದಾರರಿಗೆ ವರ್ಗಾಯಿಸಬಹುದು ಮತ್ತು ಆದ್ದರಿಂದ ನಿಮ್ಮ ಡೇಟಾವನ್ನು ಇತರ ದೇಶಗಳು ಅಥವಾ ಪ್ರದೇಶಗಳಿಗೆ ರವಾನಿಸಬಹುದಾಗಿದೆ. ಈ ಜಾಗತಿಕ ಸೌಲಭ್ಯಗಳಿರುವ ಕಾನೂನು ವ್ಯಾಪ್ತಿಯು ನಿಮ್ಮ ವ್ಯಾಪ್ತಿಯಲ್ಲಿರುವಂತೆಯೇ ವೈಯಕ್ತಿಕ ಮಾನದಂಡಗಳಿಗೆ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು ಅಥವಾ ಇರಬಹುದಾಗಿದೆ. ಬೇರೆ ಬೇರೆ ಡೇಟಾ ಸುರಕ್ಷತೆ ಕಾನೂನುಗಳಲ್ಲಿ ಬೇರೆ ಬೇರೆ ಅಪಾಯಗಳು ಇದ್ದೇ ಇರುತ್ತವೆ. ಆದಾಗ್ಯೂ, ಈ ಗೌಪ್ಯತೆ ನೀತಿಯನ್ನು ಅನುಸರಿಸಲು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನಮ್ಮ ಬದ್ಧತೆಯನ್ನು ಇದು ಬದಲಾಯಿಸುವುದಿಲ್ಲ.
ನಿರ್ದಿಷ್ಟವಾಗಿ,
• ಅನ್ವಯವಾಗುವ ಕಾನೂನಿನ ಪ್ರಕಾರ ಗಡಿಯಾಚೆಗಿನ ಪ್ರಸರಣಗಳನ್ನು ಹೊರತುಪಡಿಸಿ, ಚೀನಾದ ಮೇನ್‌ಲ್ಯಾಂಡ್ ಒಳಗಿನ ಕಾರ್ಯಾಚರಣೆಗಳಲ್ಲಿ ನಾವು ಸಂಗ್ರಹಿಸುವ ಮತ್ತು ಉತ್ಪಾದಿಸುವ ವೈಯಕ್ತಿಕ ಮಾಹಿತಿಯನ್ನು ಚೀನಾದ ಮೇನ್‌ಲ್ಯಾಂಡ್‌ನಲ್ಲಿರುವ ಡೇಟಾ ಕೇಂದ್ರಗಳಲ್ಲಿ ಸಂಗ್ರಹಿಸಲಾಗುತ್ತದೆ.
• ರಷ್ಯಾದ ಕಾನೂನಿನಡಿಯಲ್ಲಿ ಅನುಮತಿಸಲಾದ ಗಡಿಯಾಚೆಗಿನ ಪ್ರಸರಣಗಳನ್ನು ಹೊರತುಪಡಿಸಿ, ರಷ್ಯಾದಲ್ಲಿನ ಕಾರ್ಯಗಳಲ್ಲಿ ನಾವು ಸಂಗ್ರಹಿಸುವ ಮತ್ತು ಉತ್ಪದಿಸುವ ವೈಯಕ್ತಿಕ ಮಾಹಿತಿಯನ್ನು ರಷ್ಯಾದಲ್ಲಿರುವ ಡೇಟಾ ಕೇಂದ್ರಗಳಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ.
• ಭಾರತದಲ್ಲಿ ನಾವು ಸಂಗ್ರಹಿಸುವ ಮತ್ತು ಉತ್ಪಾದಿಸುವ ವೈಯಕ್ತಿಕ ಮಾಹಿತಿಯನ್ನು ಭಾರತದಲ್ಲಿರುವ ಡೇಟಾ ಕೇಂದ್ರಗಳಲ್ಲಿ ಸಂಗ್ರಹಿಸಲಾಗುತ್ತದೆ.
ನಿಮ್ಮ ಕಾನೂನು ವ್ಯಾಪ್ತಿಯ ಹೊರಗೆ ನಾವು ಮಾಹಿತಿಯನ್ನು ನಮ್ಮ ಅಂಗಸಂಸ್ಥೆಗಳಿಗೆ ಅಥವಾ ಥರ್ಡ್-ಪಾರ್ಟಿ ಸೇವಾ ಪೂರೈಕೆದಾರರಿಗೆ ವರ್ಗಾಯಿಸಬೇಕಾದರೆ, ನಾವು ಸಂಬಂಧಿತ ಅನ್ವಯಿಸುವ ಕಾನೂನುಗಳನ್ನು ಅನುಸರಿಸುತ್ತೇವೆ. ಅಂತಹ ಎಲ್ಲಾ ವರ್ಗಾವಣೆಗಳು ಏಕರೂಪದ ಸುರಕ್ಷತೆಗಳನ್ನು ಜಾರಿಗೆ ತರುವ ಮೂಲಕ ಅನ್ವಯವಾಗುವ ಸ್ಥಳೀಯ ಡೇಟಾ ಸಂರಕ್ಷಣಾ ಕಾನೂನುಗಳ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂದು ನಾವು ಖಚಿತಪಡಿಸುತ್ತೇವೆ. ನಮ್ಮ ಭದ್ರತೆ ಕ್ರಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ನಮ್ಮನ್ನು https://privacy.mi.com/support ನಲ್ಲಿ ಸಂಪರ್ಕಿಸಬಹುದು.
ನೀವು ಯುರೋಪಿಯನ್ ಎಕನಾಮಿಕ್ ಏರಿಯಾ (EEA) ಪ್ರದೇಶದಲ್ಲಿ ನಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಬಳಸಿದರೆ, Xiaomi Technology Netherlands B.V. ಡೇಟಾ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮತ್ತು Xiaomi Technologies Singapore Pte. Ltd. ಈ ಡೇಟಾ ಪ್ರಕ್ರಿಯೆಗೆ ಜವಾಬ್ದಾರಿಯಾಗಿರುತ್ತದೆ. ಸಂಪರ್ಕ ವಿವರಗಳನ್ನು "ನಮ್ಮನ್ನು ಸಂಪರ್ಕಿಸಿ" ವಿಭಾಗದಲ್ಲಿ ಕಾಣಬಹುದಾಗಿದೆ.
Xiaomi ನಿಮ್ಮಿಂದ EEA ನಲ್ಲಿ ರಚನೆಯಾದ ವೈಯಕ್ತಿಕ ಡೇಟಾವನ್ನು Xiaomi ಸಮೂಹ ಘಟಕಕ್ಕೆ ಅಥವಾ EEA ಹೊರಗಿನ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರಿಗೆ ಹಂಚಿಕೊಂಡರೆ, ನಾವು ಅದನ್ನು EU ಪ್ರಮಾಣಿತ ಒಪ್ಪಂದದ ಷರತ್ತುಗಳ ಆಧಾರದ ಮೇಲೆ ಅಥವಾ GDPR ನಲ್ಲಿ ಒದಗಿಸಲಾದ ಯಾವುದೇ ಸುರಕ್ಷತೆಗಳ ಆಧಾರದ ಮೇಲೆ ಹಾಗೆ ಮಾಡುತ್ತೇವೆ. ನಮ್ಮ ಭದ್ರತೆ ಕ್ರಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಥವಾ ನಮ್ಮ ಪ್ರಮಾಣೀಕೃತ ಒಡಂಬಡಿಕೆಯ ಕಲಂನ ನಕಲುಪ್ರತಿಯೊಂದಕ್ಕೆ ವಿನಂತಿ ಸಲ್ಲಿಸಲು ನೀವು ನಮ್ಮನ್ನು https://privacy.mi.com/support ನಲ್ಲಿ ಸಂಪರ್ಕಿಸಬಹುದು.
7. ಅಪ್ರಾಪ್ತರ ಸುರಕ್ಷತೆ
ನಮ್ಮ ಉತ್ಪನ್ನಗಳು ಅಥವಾ ಸೇವೆಗಳ ಮಗುವಿನ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಪಾಲಕರ ಅಥವಾ ಪೋಷಕರ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ಪರಿಗಣಿಸುತ್ತೇವೆ. ಆದಾಗ್ಯೂ, ನಾವು ಮಗುವಿಗೆ ನೇರವಾಗಿ ಸೇವೆಗಳನ್ನು ನೀಡುವುದಿಲ್ಲ ಅಥವಾ ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಬಳಸುವುದಿಲ್ಲ.
ನೀವು ಪಾಲಕರು ಅಥವಾ ಪೋಷಕರಾಗಿದ್ದರೆ ಮತ್ತು ಅಪ್ರಾಪ್ತರು ತಮ್ಮ ವೈಯಕ್ತಿಕ ಮಾಹಿತಿಯನ್ನು Xiaomi ಗೆ ಒದಗಿಸಿದ್ದಾರೆ ಎಂದು ನೀವು ಭಾವಿಸಿದರೆ, ಅಂಥ ವೈಯಕ್ತಿಕ ಮಾಹಿತಿಯನ್ನು ತಕ್ಷಣವೇ ತೆಗೆದುಹಾಕಲಾಗಿದೆ ಮತ್ತು ಅಪ್ರಾಪ್ತರು ಅನ್ವಯವಾಗುವ ಯಾವುದೇ Xiaomi ಸೇವೆಗಳಿಂದ ಅನ್‌ಸಬ್‌ಸ್ಕ್ರೈಬ್ ಆಗಿದ್ದಾರೆ ಎಂಬುದನ್ನು ಎಂದು ಖಚಿತಪಡಿಸಿಕೊಳ್ಳಲು https://privacy.mi.com/support ನಲ್ಲಿ ನಮ್ಮನ್ನು ಸಂಪರ್ಕಿಸಿ.
8. ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಮತ್ತು ಸೇವೆಗಳು
ಥರ್ಡ್ ಪಾರ್ಟಿ ಮೂಲಕ ಒದಗಿಸುವ ಉತ್ಪನ್ನಗಳು ಅಥವಾ ಸೇವೆಗಳಿಗೆ ನಮ್ಮ ಗೌಪ್ಯತೆ ನೀತಿ ಅನ್ವಯಿಸುವುದಿಲ್ಲ. ನೀವು ಬಳಸುವ Xiaomi ಉತ್ಪನ್ನ ಅಥವಾ ಸೇವೆಯನ್ನು ಅವಲಂಬಿಸಿ, ಇದು ಥರ್ಡ್ ಪಾರ್ಟಿ ಉತ್ಪನ್ನಗಳು, ಧ್ವನಿ ಬೆಂಬಲ, ಕ್ಯಾಮೆರಾ ಸಂಸ್ಕರಣೆ, ವಿಡಿಯೋ ಪ್ಲೇಬ್ಯಾಕ್, ಸಿಸ್ಟ್ಂ ತೆರವುಗೊಳಿಸುವಿಕೆ ಮತ್ತು ಭದ್ರತೆ ಸಂಬಂಧಿತ ಸೇವೆಗಳು, ಗೇಮಿಂಗ್, ಅಂಕಿಅಂಶಗಳು, ಸಾಮಾಜಿಕ ಮಾಧ್ಯಮ ಸಂವಹನ, ಪಾವತಿ ಪ್ರಕ್ರಿಯೆ, ನಕ್ಷೆ ನ್ಯಾವಿಗೇಶನ್ ಹಂಚಿಕೆ, ಪುಶ್, ಮಾಹಿತಿ ಫಿಲ್ಟರಿಂಗ್, ಇನ್‌ಪುಟ್ ವಿಧಾನಗಳನ್ನು ಒಳಗೊಂಡ ಸೇವೆಗಳ ಸಂಯೋಜನೆಯಾಗಿರಬಹುದು, ಇತ್ಯಾದಿ. ಇವುಗಳಲ್ಲಿ ಕೆಲವನ್ನು ಥರ್ಡ್ ಪಾರ್ಟಿಗಳ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳ ರೂಪದಲ್ಲಿ ಒದಗಿಸಲಾಗುವುದು ಮತ್ತು ಕೆಲವು SDKಗಳು, APIಗಳು ಮುಂತಾದವುಗಳ ರೂಪದಲ್ಲಿ ಪ್ರವೇಶಿಸಲ್ಪಡುತ್ತವೆ. ನೀವು ಈ ಉತ್ಪನ್ನಗಳು ಅಥವಾ ಸೇವೆಗಳನ್ನು ಬಳಸುವಾಗ ನಿಮ್ಮ ಮಾಹಿತಿಯನ್ನು ಸಹ ಸಂಗ್ರಹಿಸಬಹುದು. ಈ ಕಾರಣಕ್ಕಾಗಿ, ನೀವು ನಮ್ಮದನ್ನು ಓದುವಂತೆಯೇ ಥರ್ಡ್ ಪಾರ್ಟಿಗಳ ಗೌಪ್ಯತೆ ನೀತಿಯನ್ನೂ ಓದಲು ಕೊಂಚ ಸಮಯ ಮೀಸಲಿಡುವಂತೆ ನಾವು ಸೂಚಿಸುತ್ತೇವೆ. ಥರ್ಡ್ ಪಾರ್ಟಿಗಳು ನಿಮ್ಮಿಂದ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಅದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ. ನಮ್ಮ ಸೇವೆಗಳಿಂದ ಲಿಂಕ್ ಮಾಡಲಾದ ಇತರ ಸೈಟ್‌ಗಳಿಗೆ ನಮ್ಮ ಗೌಪ್ಯತೆ ನೀತಿಯು ಅನ್ವಯಿಸುವುದಿಲ್ಲ.
ಮೇಲೆ ಪಟ್ಟಿ ಮಾಡಲಾದ ನಿರ್ದಿಷ್ಟ ಉತ್ಪನ್ನಗಳನ್ನು ನೀವು ಬಳಸುವಾಗ ಥರ್ಡ್ ಪಾರ್ಟಿ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಯಾವಾಗ ಅನ್ವಯವಾಗಬಹುದು ಎಂಬುದಕ್ಕೆ ಈ ಕೆಳಗಿನ ಉದಾಹರಣೆಗಳಿವೆ:
ನಿಮ್ಮ ಆರ್ಡರ್ ಅನ್ನು ಅಂತಿಮಗೊಳಿಸಲು ಮತ್ತು ಪಾವತಿಸಲು ನೀವು ಥರ್ಡ್ ಪಾರ್ಟಿ ಪರಿಶೀಲನೆಗೆ ಸೇವಾ ಪೂರೈಕೆದಾರರನ್ನು ಬಳಸುವಾಗ, ಥರ್ಡ್ ಪಾರ್ಟಿಯ ಗೌಪ್ಯತೆ ನೀತಿಯೊಂದಿಗೆ ಪರಿಶೀಲನೆ ಅವಧಿಯಲ್ಲಿ ನೀವು ಒದಗಿಸಿದ ವೈಯಕ್ತಿಕ ಮಾಹಿತಿಯನ್ನು ಥರ್ಡ್ ಪಾರ್ಟಿಯ ಗೌಪ್ಯತೆ ನೀತಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ.
ನೀವು ಭದ್ರತೆಯ ಆ್ಯಪ್‌ನಲ್ಲಿ ಭದ್ರತೆಯ ಸ್ಕ್ಯಾನ್ ಫೀಚರ್ ಬಳಸುವಾಗ, ನಿಮ್ಮ ಸೇವೆಯ ಆಯ್ಕೆಯ ಆಧಾರದ ಮೇಲೆ ಈ ಕೆಳಗಿನವುಗಳಲ್ಲಿ ಒಂದು ಅನ್ವಯವಾಗುತ್ತದೆ:
• Avast ನ ಗೌಪ್ಯತೆ ಮತ್ತು ಮಾಹಿತಿಯ ಭದ್ರತೆ ನೀತಿ: https://www.avast.com/privacy-policy
• Antiy Mobile Security AVL SDK ಯ ಗೌಪ್ಯತೆ ನೀತಿ: https://www.avlsec.com/en/privacy-policy
• Tencent ನ ಗೌಪ್ಯತೆ ನೀತಿ: https://privacy.qq.com/
ಭದ್ರತೆ ಆ್ಯಪ್‌ನಲ್ಲಿರುವ ಕ್ಲೀನರ್ ಫೀಚರ್ ಬಳಸುವಾಗ, Tencent ಗೌಪ್ಯತೆ ನೀತಿ ಅನ್ವಯಿಸುತ್ತವೆ: https://privacy.qq.com
ನೀವು ಹಲವು ನಿರ್ದಿಷ್ಟ ಸಿಸ್ಟಂ ಆ್ಯಪ್‌ಗಳಲ್ಲಿ ಜಾಹೀರಾತು ಸೇವೆಗಳನ್ನು ಬಳಸುವಾಗ, ನಿಮ್ಮ ಸೇವೆಯ ಆಯ್ಕೆಯ ಆಧಾರದ ಮೇಲೆ ಈ ಕೆಳಗಿನವುಗಳಲ್ಲಿ ಒಂದು ಅನ್ವಯವಾಗುತ್ತದೆ:
• Google ನ ಗೌಪ್ಯತೆ ನೀತಿ: https://www.google.com/policies/privacy
• Facebook ಗೌಪ್ಯತೆ ನೀತಿ: https://www.facebook.com/about/privacy/update?ref=old_policy
ನೀವು Google ಇನ್‌ಪುಟ್ ವಿಧಾನ ಬಳಸುವಾಗ, Google ಗೌಪ್ಯತೆ ನೀತಿ ಅನ್ವಯವಾಗುತ್ತದೆ: https://policies.google.com/privacy
ಅಂಕಿ-ಅಂಶಗಳನ್ನು ವಿಶ್ಲೇಷಿಸುವಾಗ, ಆ್ಯಪ್ ಕ್ರ್ಯಾಶ್ ರೇಟ್ ಹಾಗೂ ಕ್ಲೌಡ್ ನಿಯಂತ್ರಣ ಸಾಮರ್ಥ್ಯಗಳನ್ನು ಮಾನಿಟರ್ ಮಾಡುವಾಗ ನಾವು Google Analytics For Firebase ಅಥವಾ Google Inc ಒದಗಿಸಿರುವ Firebase Analytic ಅನ್ನು ಬಳಸುತ್ತೇವೆ. Google Firebase ಗೌಪ್ಯತೆ ನೀತಿ ಬಗ್ಗೆ ಇನ್ನಷ್ಟು ಓದಿ: https://policies.google.com/privacy ಮತ್ತು https://www.google.com/policies/privacy/partners.
Xiaomi ಸಿಸ್ಟಂ ಆ್ಯಪ್‌ಗಳಲ್ಲಿ ಜಾಹೀರಾತುಗಳನ್ನು ನೀಡಲು, ಥರ್ಡ್- ಪಾರ್ಟಿ ಜಾಹೀರಾತು ಪಾಲುದಾರರು ನಿಮ್ಮ ಆನ್‌ಲೈನ್ ಚಟುವಟಿಕೆಯಿಂದ ಅಂದರೆ, ನಿಮ್ಮ ಜಾಹೀರಾತು ಕ್ಲಿಕ್‌ಗಳು ಹಾಗೂ ಕಂಟೆಂಟ್ ವೀಕ್ಷಣೆಗಳು, ಅಥವಾ ಇತರೆ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಲ್ಲಿನ ನಿಮ್ಮ ಇತರೆ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಡೇಟಾವನ್ನು ಸಂಗ್ರಹಿಸಬಹುದು.
• Google ನ ಗೌಪ್ಯತೆ ನೀತಿ: https://www.google.com/policies/privacy
• Facebook ಗೌಪ್ಯತೆ ನೀತಿ: https://www.facebook.com/about/privacy/update?ref=old_policy
• Unity ನ ಗೌಪ್ಯತೆ ನೀತಿ: https://unity3d.com/legal/privacy-policy
• Vungle ನ ಗೌಪ್ಯತೆ ನೀತಿ: https://vungle.com/privacy/
• ironSource ನ ಗೌಪ್ಯತೆ ನೀತಿ: https://developers.ironsrc.com/ironsource-mobile/air/ironsource-mobile-privacy-policy/
• AppLovin ನ ಗೌಪ್ಯತೆ ನೀತಿ: https://www.applovin.com/privacy/
• Chartboost ಗೌಪ್ಯತೆ ನೀತಿ: https://answers.chartboost.com/en-us/articles/200780269
• MoPub ನ ಗೌಪ್ಯತೆ ನೀತಿ: https://www.mopub.com/legal/privacy/
• Mytarget ನ ಗೌಪ್ಯತೆ ನೀತಿ: https://legal.my.com/us/mail/privacy_nonEU/
• Yandex ನ ಗೌಪ್ಯತೆ ನೀತಿ: https://yandex.com/legal/privacy/
• Tapjoy ನ ಗೌಪ್ಯತೆ ನೀತಿ: https://www.tapjoy.com/legal/advertisers/privacy-policy/
• AdColony ಯ ಗೌಪ್ಯತೆ ನೀತಿ: https://www.adcolony.com/privacy-policy/
ನಮ್ಮ ಜಾಹೀರಾತು ಪಾಲುದಾರರ ಸೂಚನೆಯಂತೆ, ಅವರಿಗೆ ವರದಿಯನ್ನು ಒದಗಿಸಲು ನಾವು ನಿಮ್ಮ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಥರ್ಡ್ ಪಾರ್ಟಿ ಆಟ್ರಿಬ್ಯೂಶನ್ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತೇವೆ. ಇದರಲ್ಲಿ ನೀವು ನಮ್ಮ ಜಾಹೀರಾತುಗಳೊಂದಿಗೆ (ಯಾವುದಾದರೂ ಇದ್ದರೆ) ನಡೆಸುವ ಕೊಡು-ಕೊಳ್ಳುವಿಕೆಯ ಮೆಟ್ರಿಕ್‌ಗಳನ್ನು ಒಳಗೊಂಡಿರುತ್ತದೆ. ನೀವು ಬಳಸುವ ಸಿಸ್ಟಂ ಆ್ಯಪ್‌ಗಳ ಆಧಾರದ ಮೇಲೆ, ಥರ್ಡ್-ಪಾರ್ಟಿ ಆಟ್ರಿಬ್ಯೂಶನ್ ಸಂಸ್ಥೆಗಳಲ್ಲಿ ಇವು ಇರಬಹುದು:
• Adjust ನ ಗೌಪ್ಯತೆ ನೀತಿ: https://www.adjust.com/terms/privacy-policy/
• Appsflyer ನ ಗೌಪ್ಯತೆ ನೀತಿ: https://www.appsflyer.com/privacy-policy/
• Affise ನ ಗೌಪ್ಯತೆ ನೀತಿ: https://affise.com/privacy-policy/
• Miaozhen ನ ಗೌಪ್ಯತೆ ನೀತಿ: https://www.miaozhen.com/en/privacy
• Nielsen ನ ಗೌಪ್ಯತೆ ನೀತಿ: https://www.nielsen.com/cn/en/legal/privacy-policy/
9. ನಾವು ಈ ಗೌಪ್ಯತೆ ನೀತಿಯನ್ನು ಹೇಗೆ ಅಪ್‌ಡೇಟ್ ಮಾಡಬಹುದು
ವ್ಯವಹಾರ, ತಂತ್ರಜ್ಞಾನ ಹಾಗೂ ಅನ್ವಯವಾಗುವ ಕಾನೂನು ಹಾಗೂ ಉತ್ತಮ ವರ್ತನೆಯಲ್ಲಿನ ಬದಲಾವಣೆಗಳ ಆಧಾರದ ಮೇಲೆ ನಾವು ನಿಯಮಿತವಾಗಿ ಗೌಪ್ಯತೆ ನೀತಿಯನ್ನು ಪರಿಶೀಲಿಸುತ್ತಿರುತ್ತೇವೆ ಮತ್ತು ನಾವು ಈ ಗೌಪ್ಯತೆ ನೀತಿಯನ್ನು ಅಪ್‌ಡೇಟ್ ಕೂಡ ಮಾಡಬಹುದು. ನಾವು ಈ ಗೌಪ್ಯತೆ ನೀತಿಗೆ ಭೌತಿಕ ಬದಲಾವಣೆ ಮಾಡಿದರೆ, ನಾವು ಇಮೇಲ್‌ನಂತಹ ನಿಮ್ಮ ನೋಂದಾಯಿತ ಸಂಪರ್ಕ ಮಾಹಿತಿಗಳ (ನಿಮ್ಮ ಖಾತೆಯಲ್ಲಿ ನಿರ್ದಿಷ್ಟಪಡಿಸಿದ ಇಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ) ಮೂಲಕ ನಿಮಗೆ ತಿಳಿಸುತ್ತೇವೆ ಅಥವಾ Xiaomi ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತೇವೆ ಅಥವಾ ಮೊಬೈಲ್ ಡಿವೈಸ್‌ಗಳ ಮೂಲಕ ನಿಮಗೆ ತಿಳಿಸುತ್ತೇವೆ ಆ ಮೂಲಕ ನಾವು ಸಂಗ್ರಹಿಸುವ ಮಾಹಿತಿ ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತು ನೀವು ತಿಳಿಯಬಹುದು. ಗೌಪ್ಯತೆ ನೀತಿಗೆ ಅಂತಹ ಬದಲಾವಣೆಗಳು ಸೂಚನೆ ಅಥವಾ ವೆಬ್‌ಸೈಟ್‌ನಲ್ಲಿ ನಿರ್ದಿಷ್ಟಪಡಿಸಿದ ಪರಿಣಾಮಕಾರಿ ದಿನಾಂಕದಿಂದ ಅನ್ವಯವಾಗುತ್ತವೆ. ನಮ್ಮ ಗೌಪ್ಯತೆ ಅಭ್ಯಾಸಗಳಲ್ಲಿನ ಇತ್ತೀಚಿನ ಮಾಹಿತಿಗಾಗಿ ಈ ಪುಟವನ್ನು ನಿಯಮಿತವಾಗಿ ಪರಿಶೀಲಿಸಲು ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ. ವೆಬ್‌ಸೈಟ್, ಮೊಬೈಲ್ ಮತ್ತು/ಅಥವಾ ಯಾವುದೇ ಇತರ ಡಿವೈಸ್‌ನಲ್ಲಿ ನೀವು ಉತ್ಪನ್ನಗಳು ಮತ್ತು ಸೇವೆಗಳ ನಿಮ್ಮ ನಿರಂತರ ಬಳಕೆಯನ್ನು ಅಪ್‌ಡೇಟ್ ಆದ ನಮ್ಮ ಗೌಪ್ಯತೆ ನೀತಿಗೆ ನೀವು ಒದಗಿಸುವ ಅನುಮೋದನೆ ಎಂದು ಪರಿಗಣಿಸಲಾಗುತ್ತದೆ. ಅನ್ವಯವಾಗುವ ಕಾನೂನುಗಳಿಗೆ ಅಗತ್ಯಕ್ಕೆ ತಕ್ಕಂತೆ, ನಾವು ನಿಮ್ಮಿಂದ ಹೆಚ್ಚುವರಿ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸಿದಾಗ ಅಥವಾ ಹೊಸ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಬಳಸುವಾಗ ಅಥವಾ ಬಹಿರಂಗಪಡಿಸಿದಾಗ ನಿಮ್ಮ ಸ್ಪಷ್ಟ ಒಪ್ಪಿಗೆಯನ್ನು ಕೇಳುತ್ತೇವೆ.
10. ನಮ್ಮನ್ನು ಸಂಪರ್ಕಿಸಿ
ನಿಮಗೆ Xiaomi ಯ ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು Xiaomi ಯು ಸಂಗ್ರಹಿಸುವುದು, ಬಳಸುವುದು ಅಥವಾ ಬಹಿರಂಗಗೊಳಿಸುವುದು ಕುರಿತಂತೆ ಯಾವುದೇ ಪ್ರಶ್ನೆಗಳು, ಕಾಮೆಂಟ್‌ಗಳು ಇದ್ದರೆ ದಯವಿಟ್ಟು https://privacy.mi.com/support ಅಥವಾ ಕೆಳಗಿನ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಿ. ವೈಯಕ್ತಿಕ ಮಾಹಿತಿಯನ್ನು ಬಳಸುವುದು ಅಥವಾ ಡೌನ್‍ಲೋಡ್ ಮಾಡುವುದು ಕುರಿತ ವೈಯಕ್ತಿಕ ಮಾಹಿತಿ ವಿನಂತಿಗಳನ್ನು ನಾವು ಸ್ವೀಕರಿಸಿದಾಗ, ಈ ಬಗೆಯ ಸಮಸ್ಯೆಗಳನ್ನು ಬಗೆಹರಿಸುವ ವೃತ್ತಿಪರ ತಂಡವನ್ನು ನಾವು ಹೊಂದಿದ್ದೇವೆ. ನಿಮ್ಮ ಪ್ರಶ್ನೆಯು ಮಹತ್ವದ ಸಮಸ್ಯೆಯನ್ನು ಒಳಗೊಂಡಿದ್ದರೆ, ಹೆಚ್ಚಿನ ಮಾಹಿತಿಗಾಗಿ ನಾವು ನಿಮ್ಮನ್ನು ಕೇಳಬಹುದು.
ನಿಮ್ಮ ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ನಾವು ಒದಗಿಸಿದ ಪ್ರತಿಕ್ರಿಯೆಯಿಂದ ನಿಮಗೆ ಸಮಾಧಾನವಾಗದಿದ್ದರೆ, ನಿಮ್ಮ ವ್ಯಾಪ್ತಿಯಲ್ಲಿರುವ ಸಂಬಂಧಿತ ಡೇಟಾ ರಕ್ಷಣಾ ಅಧಿಕಾರಿಗಳಿಗೆ ನಿಮ್ಮ ದೂರನ್ನು ನೀಡಬಹುದು. ನಮ್ಮನ್ನು ನೀವು ಸಂಪರ್ಕಿಸಿದರೆ, ನಿಮ್ಮ ನೈಜ ಪರಿಸ್ಥಿತಿಯ ಆಧಾರದ ಮೇಲೆ ಅನ್ವಯವಾಗುವಂತಹ ಸಂಬಂಧಿತ ದೂರು ಚಾನೆಲ್‌ಗಳ ಮಾಹಿತಿಯನ್ನು ನಾವು ಒದಗಿಸುತ್ತೇವೆ.
Xiaomi Communications Co., Ltd. #019, 9th Floor, Building 6, 33 Xi'erqi Middle Road, Haidian District, Beijing, China 100085
Xiaomi Technologies Singapore Pte. Ltd. 1 Fusionopolis Link #04-02/03 Nexus @One-North Singapore 138542
ಭಾರತದಲ್ಲಿರುವ ಬಳಕೆದಾರರಿಗಾಗಿ:
Xiaomi Technology India Private Limited Building Orchid, Block E, Embassy Tech Village, Outer Ring Road, Devarabisanahalli, Bengaluru, Karnataka - 560103, India
ಸೂಕ್ಷ್ಮವಾದ ವೈಯಕ್ತಿಕ ಡೇಟಾ ಅಥವಾ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವಲ್ಲಿ ಯಾವುದೇ ಲೋಪ-ದೋಷವುಂಟಾದರೆ, ಅದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಗ್ರಿವಾನ್ಸ್ ಆಫೀಸರ್‌ಗೆ ಮಾಹಿತಿ ನೀಡಬಹುದು:
ಹೆಸರು: ವಿಶ್ವನಾಥ ಸಿ
ಫೋನ್: 080 6885 6286, ಸೋಮ-ಶನಿ : 9 AM ದಿಂದ 6 PM
ಇಮೇಲ್: grievance.officer@xiaomi.com
ಯುರೋಪಿಯನ್ ಆರ್ಥಿಕ ಪ್ರದೇಶದ ಬಳಕೆದಾರರಿಗಾಗಿ (EEA):
Xiaomi Technology Netherlands B.V. Prinses Beatrixlaan 582, The Hague 2595BM Netherlands
ನಮ್ಮ ಗೌಪ್ಯತೆ ನೀತಿಯನ್ನು ಓದಲು ಸಮಯ ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು!
ಇಲ್ಲಿ ನಿಮಗಾಗಿ ಹೊಸತೇನಿದೆ
ನಾವು ಈ ಕೆಳಗಿನ ಅಪ್‌ಡೇಟ್‌ಗಳನ್ನು ಮಾಡಿದ್ದೇವೆ:
• ನಮ್ಮ ಸಂಪರ್ಕ ವಿವರಗಳನ್ನು ಅಪ್‌ಡೇಟ್ ಮಾಡಿದ್ದೇವೆ.
• ನಾವು ಹಾಗೂ ಥರ್ಡ್ ಪಾರ್ಟಿಗಳು ಸಂಗ್ರಹಿಸಿದ ಕೆಲವು ಮಾಹಿತಿಯನ್ನು ಅಪ್‌ಡೇಟ್ ಮಾಡಿದ್ದೇವೆ.
• ವೈಯುಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಿದ್ದೇವೆ.
• ನಮ್ಮ ಕಾನೂನುಬದ್ಧ ಹಿತಾಸಕ್ತಿಗಳಿಗೆ ಅನುಗುಣವಾಗಿ ಹಾಗೂ ಪುಶ್ ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಯಾವಾಗ ನಾವು ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತೇವೆ ಎಂಬುದನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಅಪ್‌ಡೇಟ್ ಮಾಡಿದ್ದೇವೆ ಹಾಗೂ ಅದರ ಕುರಿತು ಇನ್ನಷ್ಟು ಸ್ಪಷ್ಟವಾಗಿ ವಿವರಿಸಿದ್ದೇವೆ.
• ಡೇಟಾ ಧಾರಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಿದ್ದೇವೆ.
• ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ನಿಮಗಿರುವ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದೇವೆ.